ನವದೆಹಲಿ: ಕೆನಡಾದ ಮತ್ತು ಭಾರತೀಯ ಸಂಶೋಧಕರ ತಂಡದ ಸಂಶೋಧನೆಗಳ ಪ್ರಕಾರ, ಭಾರತದಲ್ಲಿ ಡೈರಿ ಉತ್ಪಾದನೆಯು 3,000 ವರ್ಷಗಳ ಹಿಂದೆಯೇ ಪ್ರಾರಂಭವಾಯಿತು ಮತ್ತು ಸಿಂಧೂ ಕಣಿವೆ ನಾಗರಿಕತೆ ಉಳಿಯಲು ಇದು ಒಂದು ಅಂಶವಾಗಿರಬಹುದು ಎಂದು ಅಂದಾಜಿಸಲಾಗಿದೆ.
ನೇಚರ್ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನದ ನೇತೃತ್ವವನ್ನು ಟೊರೊಂಟೊ ಮಿಸ್ಸಿಸ್ಸೌಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಶೋಧಕ ಕಲ್ಯಾಣ್ ಶೇಖರ್ ಚಕ್ರವರ್ತಿ ವಹಿಸಿದ್ದರು ಮತ್ತು ಭಾರತದಲ್ಲಿ ಡೈರಿ ಉತ್ಪಾದನೆಯು ಕ್ರಿ.ಪೂ 2500ರಲ್ಲಿ ಆರಂಭವಾಯಿತು ಎಂದು ಉಲ್ಲೇಖಿಸಿದ್ದಾರೆ.
“ಕ್ರಿ.ಪೂ 2500 ರಲ್ಲಿ ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಡೈರಿ ಉತ್ಪಾದನೆ ಜಾರಿಯಲ್ಲಿತ್ತು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ, ಮತ್ತು ಡೈರಿ ಉತ್ಪಾದನೆಯ ಆರಂಭಿಕ ಪುರಾವೆಗಳು ಸಿಕ್ಕಿದೆ” ಎಂದು ಚಕ್ರವರ್ತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಗುಜರಾತ್ನಲ್ಲಿರುವ ಗ್ರಾಮೀಣ ಪ್ರದೇಶವಾದ ಕೊಟಾಡಾ ಭಡ್ಲಿಯ ಪುರಾತತ್ವ ಸ್ಥಳದಲ್ಲಿ ದೊರೆತ ಕುಂಬಾರಿಕೆ ಚೂರುಗಳಲ್ಲಿನ ಶೇಷಗಳ ಆಣ್ವಿಕ ರಾಸಾಯನಿಕ ವಿಶ್ಲೇಷಣೆಯ ಆಧಾರದ ಮೇಲೆ ಫಲಿತಾಂಶಗಳು ಬಂದಿವೆ. ಅಧ್ಯಯನ ಮಾಡಿದ 59 ಮಾದರಿಗಳಲ್ಲಿ 22 ಡೈರಿ ಲಿಪಿಡ್ಗಳ ಉಪಸ್ಥಿತಿಯನ್ನು ತೋರಿಸಿದೆ. ಸ್ಥಿರ ಐಸೊಟೋಪ್ ವಿಶ್ಲೇಷಣೆ ಎಂಬ ಪ್ರಕ್ರಿಯೆಯ ಮೂಲಕ, ಡೈರಿಗೆ ಬಳಸುವ ಪ್ರಕಾರವನ್ನು ಗುರುತಿಸಲು ಸಂಶೋಧಕರಿಗೆ ಸಾಧ್ಯವಾಯಿತು ಮತ್ತು ಇವು ಆಡು ಮತ್ತು ಕುರಿಗಳಿಗಿಂತ ಹಸುಗಳು ಮತ್ತು ಎಮ್ಮೆಗಳ ಹಾಲು ಎಂದು ಸಂಶೋಧಕರು ತೀರ್ಮಾಣಕ್ಕೆ ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.