ಪೇಶಾವರ: ಪಾಕಿಸ್ಥಾನದ ಪೇಶಾವರದಲ್ಲಿ ಮದರಸಾದ ಮೇಲೆ ಬಾಂಬ್ ದಾಳಿ ನಡೆದಿದ್ದು, 70 ಮಂದಿ ಗಾಯಗೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ.
ಮದರಸಾದ ತರಗತಿಯಲ್ಲಿ ಕುರಾನ್ ಪಾಠ ನಡೆಯುತ್ತಿದ್ದು, 60 ಕ್ಕೂ ಅಧಿಕ ಮಕ್ಕಳು ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದರು. ಸ್ಫೋಟಕ್ಕೂ ಮೊದಲು ವ್ಯಕ್ತಿಯೋರ್ವ ಚೀಲವನ್ನು ಹೊತ್ತು ಮದರಸಾ ಆವರಣಕ್ಕೆ ಬಂದಿರುವುದಾಗಿ ಮಾಹಿತಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆ ವ್ಯಕ್ತಿ ಅಲ್ಲಿಂದ ತೆರಳುವ ಸಂದರ್ಭದಲ್ಲಿ ತಾನು ತಂದಿದ್ದ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಆ ಬಳಿಕ ಬಾಂಬ್ ಸ್ಪೋಟ ನಡೆದಿದೆ. ಆ ಪ್ರದೇಶದಲ್ಲಿ ಏಳು ಮೃತದೇಹಗಳು ದೊರೆತಿದ್ದು, 70 ಜನರಿಗೆ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸ್ಪೋಟದ ಜವಾಬ್ದಾರಿಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.