ನವದೆಹಲಿ: ಇಂದಿನಿಂದ ನವೆಂಬರ್ 2 ರವರೆಗೆ ʼಜಾಗೃತಿ ಅರಿವು ಸಪ್ತಾಹʼವನ್ನು ಆಚರಿಸಲಾಗುತ್ತಿದೆ.
ಈ ವರ್ಷ ʼಸತರ್ಕ್ ಭಾರತ್, ಸಮೃದ್ಧ ಭಾರತ್ʼ (ಜಾಗೃತ ಭಾರತ, ಸಮೃದ್ಧ ಭಾರತ) ಎಂಬ ಥೀಮ್ನೊಂದಿಗೆ ʼಜಾಗೃತಿ ಅರಿವು ಸಪ್ತಾಹʼವನ್ನು ಆಚರಿಸಲಾಗುತ್ತಿದೆ. ಕೇಂದ್ರ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ನವದೆಹಲಿಯ ಕೇಂದ್ರ ವಿಜಿಲೆನ್ಸ್ ಆಯೋಗದಲ್ಲಿ ಪ್ರತಿಜ್ಞೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಠಾರಿ, ನಾವೆಲ್ಲರೂ ಸಮಗ್ರತೆ ಮತ್ತು ಎಚ್ಚರಿಕೆಯೊಂದಿಗೆ ಕೆಲಸ ಮಾಡಬೇಕು ಎಂದರು.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನವು ಅಕ್ಟೋಬರ್ 31 ರಂದು ಬರುವ ವಾರದಲ್ಲಿ ಇದೆ. ಪ್ರತಿ ವರ್ಷ ಜಾಗೃತಿ ಅರಿವು ವಾರವನ್ನು ಇದೇ ಸಂದರ್ಭದಲ್ಲಿ ಆಚರಿಸಲಾಗುತ್ತದೆ.
ಸಿಬಿಐ ಇಂದಿನಿಂದ ಮೂರು ದಿನಗಳ ಜಾಗೃತಿ ಅರಿವು ಮತ್ತು ಭ್ರಷ್ಟಾಚಾರ ವಿರೋಧಿ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.