ನವದೆಹಲಿ: ಭಾರತವು ಮಂಗಳವಾರ ಮೂರು ತಿಂಗಳ ನಂತರ ಒಂದೇ ದಿನದಲ್ಲಿ 40,000 ಕ್ಕಿಂತ ಕಡಿಮೆ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,470 ಹೊಸ ಕೋವಿಡ್ -19 ಸೋಂಕುಗಳು ವರದಿಯಾಗಿವೆ.
ಇದೇ ಅವಧಿಯಲ್ಲಿ ದಾಖಲಾದ ಹೊಸ ಸಾವುಗಳು ಸತತ ಎರಡನೇ ದಿನವೂ 500 ಕ್ಕಿಂತ ಕಡಿಮೆ ಆಗಿದೆ. ಭಾರತದಲ್ಲಿ 488 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 1,19,502 ಕ್ಕೆ ಏರಿದೆ.
ಭಾರತದ ಒಟ್ಟು ಕೋವಿಡ್-19 ಪ್ರಕರಣ ಈಗ 79,46,429 ಆಗಿದ್ದು, ಈ ಪೈಕಿ 72,01,070 ಜನರು ಚೇತರಿಸಿಕೊಂಡಿದ್ದಾರೆ. ರಾಷ್ಟ್ರೀಯ ಚೇತರಿಕೆ ದರವು ಈಗ ಶೇಕಡಾ 90.62 ರಷ್ಟಿದ್ದರೆ, ಸಾವಿನ ಪ್ರಮಾಣವು ಶೇಕಡಾ 1.50 ರಷ್ಟಿದೆ.
ಕೊರೋನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸತತವಾಗಿ ಐದು ದಿನಗಳವರೆಗೆ 7 ಲಕ್ಷಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ 6,25,857 ಕೊರೋನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣದ ಶೇಕಡಾ 7.88 ರಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.