ಕೋಲ್ಕತ್ತಾ: ಪಶ್ಚಿಮಬಂಗಾಳ ದುರ್ಗಾ ಪೂಜೆಗೆ ತುಂಬಾ ಜನಪ್ರಿಯವಾಗಿದೆ. ಅಲ್ಲಿ ನಾನಾ ತರನಾದ ದುರ್ಗಾ ಪೆಂಡಾಲ್ಗಳನ್ನು ನಾವು ಕಾಣಬಹುದಾಗಿದೆ. ಥೀಮ್ ಆಧಾರಿತ ದುರ್ಗಾ ಪೆಂಡಾಲ್ಗಳು ಜನರನ್ನು ಹೆಚ್ಚು ಆಕರ್ಷಿತಗೊಳಿಸುತ್ತವೆ. ಮುರ್ಶಿದಾಬಾದಿನ ದುರ್ಗಾ ಪೆಂಡಾಲ್ವೊಂದು ಕೊರೋನಾ ಯೋಧರಿಗೆ ವಿಶೇಷ ರೀತಿಯ ಗೌರವಗಳನ್ನು ಸಲ್ಲಿಸಿ ಎಲ್ಲರ ಗಮನವನ್ನು ಸೆಳೆದಿದೆ.
ಇಲ್ಲಿ ದುರ್ಗಾ ದೇವಿಯು ಆರೋಗ್ಯ ಕಾರ್ಯಕರ್ತರಿಗೆ ಕಿರೀಟಧಾರಣೆ ಮಾಡುವುದನ್ನು ಕಾಣಬಹುದು. ದುರ್ಗಾ ದೇವಿಯು ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ತನ್ನ ಸಾಂಪ್ರದಾಯಿಕ ತ್ರಿಶೂಲದ ಬದಲು ಕೈಯಲ್ಲಿ ಕಿರೀಟವನ್ನು ಇಟ್ಟುಕೊಂಡು ಗೌರವ ಸಲ್ಲಿಸುತ್ತಿದ್ದಾಳೆ.
“ಈ ವರ್ಷ ನಮ್ಮ ಥೀಮ್ ಕೋವಿಡ್-2020. ದೇಶಾದ್ಯಂತದ ಆರೋಗ್ಯ ಕಾರ್ಯಕರ್ತರು ನಮಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ನಮ್ಮ ಪೆಂಡಾಲ್ನ ಥೀಮ್ ಮೂಲತಃ ಅವರಿಗೆ ಗೌರವ ಸಲ್ಲಿಸುವುದಾಗಿದೆ. ದುರ್ಗಾ ದೇವಿಯು ಆರೋಗ್ಯ ಕಾರ್ಯಕರ್ತರಿಗೆ ಕಿರೀಟಧಾರಣೆ ಮಾಡುತ್ತಿರುವಂತೆ ಬಿಂಬಿಸಲಾಗಿದೆ. ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರಿಗೆ ಅರಿವು ಮೂಡಿಸುವುದು ಇದರ ಮತ್ತೊಂದು ಸಂದೇಶವಾಗಿದೆ ”ಎಂದು ಪೆಂಡಾಲ್ ಕ್ಲಬ್ನ ಸದಸ್ಯ ಶೌಮೋಡಿಪ್ ಶೋನೈ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.