ನವದೆಹಲಿ: ಭಾರತೀಯ ನೌಕಾಪಡೆಯು ತನ್ನ ಯುದ್ಧ ಸನ್ನದ್ಧತೆಯನ್ನು ಶುಕ್ರವಾರ ಪ್ರದರ್ಶಿಸಿದೆ. ಅರಬ್ಬಿ ಸಮುದ್ರದಲ್ಲಿ ಹಡಗು ವಿರೋಧಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸುತ್ತಿರುವ ವಿಡಿಯೋ ಅನ್ನು ಅದು ಬಿಡುಗಡೆ ಮಾಡಿದೆ.
ವಿಡಿಯೋದಲ್ಲಿ ಹಡಗು ವಿರೋಧಿ ಕ್ಷಿಪಣಿಯು ಮುಳುಗುತ್ತಿರುವ ಹಡಗೊಂದನ್ನು ಅತ್ಯಂತ ನಿಖರವಾಗಿ ಗುರಿಯಿಟ್ಟು ಧ್ವಂಸ ಮಾಡುವುದನ್ನು ನಾವು ನೋಡಬಹುದಾಗಿದೆ.
ಏರ್ಕ್ರಾಫ್ಟ್ ಕ್ಯಾರಿಯರ್ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಹಲವಾರು ಯುದ್ಧನೌಕೆಗಳು, ದಾಳಿ ಹೆಲಿಕಾಪ್ಟರ್ಗಳು, ವಿಮಾನಗಳು ಮತ್ತು ನೌಕಾಪಡೆಯ ಇತರ ಆಸ್ತಿಗಳನ್ನು ಒಳಗೊಂಡ ಮೆಗಾ ನೇವಲ್ ಡ್ರಿಲ್ನ ಭಾಗವಾಗಿ ಈ ಕ್ಷಿಪಣಿಯನ್ನು ಫ್ರಂಟ್ಲೈನ್ ಕಾರ್ವೆಟ್ ಐಎನ್ಎಸ್ ಪ್ರಬಲ್ ಮೂಲಕ ಹಾರಿಸಿ ಪರೀಕ್ಷಿಸಲಾಗಿದೆ.
ಭಾರತೀಯ ನೌಕಾಪಡೆಯ ವಕ್ತಾರರು ಕ್ಷಿಪಣಿ ತನ್ನ ಗುರಿಯಾದ ಹಳೆಯ ಹಡಗನ್ನು ತನ್ನ ಗರಿಷ್ಠ ವ್ಯಾಪ್ತಿಯಲ್ಲಿ ನಿಖರತೆಯೊಂದಿಗೆ ಹೊಡೆದಿದೆ ಎಂದು ಟ್ವೀಟ್ ಮಾಡಿದ್ದಾರೆ.
#AShM launched by #IndianNavy Missile Corvette #INSPrabal, homes on with deadly accuracy at max range, sinking target ship. #StrikeFirst #StrikeHard #StrikeSure #हरकामदेशकेनाम pic.twitter.com/1vkwzdQxQV
— SpokespersonNavy (@indiannavy) October 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.