ನವದೆಹಲಿ: ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಫೇಶಿಯಲ್ ರೆಕಗ್ನಿಷನ್ ಸಿಸ್ಟಂ ಮೂಲಕ ತಮ್ಮ ಹತ್ತನೇ ತರಗತಿ ಮತ್ತು ಹನ್ನೆರಡನೇಯ ತರಗತಿಯ ಡಿಜಿಟಲ್ ಶೈಕ್ಷಣಿಕ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಕಂಪ್ಯೂಟರ್ ಅಪ್ಲಿಕೇಶನ್ ಈ ಮೊದಲೇ ಡಾಟಾಬೇಸ್ನಲ್ಲಿ ಸಂಗ್ರಹವಾಗಿರುವ ವಿದ್ಯಾರ್ಥಿಗಳ ಮುಖಚರ್ಯೆಯನ್ನು ಹೊಂದಿಕೆ ಮಾಡುವ ಮೂಲಕ ಕಾರ್ಯ ನಿರ್ವಹಿಸಲಿದೆ. ನಿರ್ದಿಷ್ಟ ವಿಧಾನದ ಮೂಲಕ ಕಂಪ್ಯೂಟರ್ ಮತ್ತು ಮಾನವನ ನಡುವೆ ನಡೆಯುವ ಸಂವಹನದ ಮೂಲಕ ಈ ಫೇಶಿಯಲ್ ರೆಕಗ್ನಿಷನ್ ಪ್ರಕ್ರಿಯೆ ನಡೆಯಲಿದೆ. ಆ ಮೂಲಕ ಸಿಬಿಎಸ್ಇ ಅಡ್ಮಿಟ್ ಕಾರ್ಡ್ನಲ್ಲಿನ ವಿದ್ಯಾರ್ಥಿಯ ಭಾವಚಿತ್ರದ ಜೊತೆಗೆ ಆತನ ಮುಖವನ್ನು ಈ ವಿಧಾನದ ಮೂಲಕ ಹೊಂದಿಕೆ ಮಾಡಿ, ಹೊಂದಿಕೆಯಾದಲ್ಲಿ ಡಿಜಿಟಲ್ ದಾಖಲೆಗಳನ್ನು ವಿದ್ಯಾರ್ಥಿ ಪಡೆದುಕೊಳ್ಳಬಹುದಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಪ್ರಕ್ರಿಯೆಗಳ ಬಳಿಕ ಪ್ರಮಾಣಪತ್ರವನ್ನು ವಿದ್ಯಾರ್ಥಿಗಳಿಗೆ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ. 2020 ರ ಎಲ್ಲಾ ದಾಖಲೆಗಳು ಈ ಅಪ್ಲಿಕೇಶನ್ ಪರ್ನಿಯಾಮ್ ಮಂಜುಷ (parniyaam manjusha) ಮತ್ತು ಡಿಜಿ ಲಾಕರ್ https://digilocker.gov.in/cbse-certificate.html ಗಳಲ್ಲಿ ಲಭ್ಯವಿದೆ ಎಂದು ಸಿಬಿಎಸ್ಇ ತಿಳಿಸಿದೆ.
ಸಿಬಿಎಸ್ಇ ಈಗಾಗಲೇ ಡಿಜಿ ಲಾಕರ್ನಲ್ಲಿ 12 ಕೋಟಿ ಡಿಜಿಟಲ್ ಅಕಾಡೆಮಿಕ್ ದಾಖಲೆಗಳನ್ನು ಸಂಗ್ರಹಿಸಿದೆ. ವಿದ್ಯಾರ್ಥಿಗಳು ಈ ವ್ಯವಸ್ಥೆಯ ಮೂಲಕ ಮಾರ್ಕ್ ಕಾರ್ಡ್, ಮೈಗ್ರೇಶನ್ ಸರ್ಟಿಫಿಕೇಟ್, ಪಾಸ್ ಗಳನ್ನು ಪಡೆಯಬಹುದಾಗಿದೆ. ಜೊತೆಗೆ ಈ ವ್ಯವಸ್ಥೆಯು ವಿದೇಶಿ ವಿದ್ಯಾರ್ಥಿಗಳಿಗೆ, ಆಧಾರ್, ಮೊಬೈಲ್ ಸಂಖ್ಯೆ ತಪ್ಪಾಗಿ ನಮೂದಿಸಿರುವ ವಿದ್ಯಾರ್ಥಿಗಳಿಗೂ ಅನುಕೂಲಕಾರಿಯಾಗಿ ಪರಿಣಮಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.