ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ವಿದೇಶೀಯರು ಭಾರತಕ್ಕೆ ಭೇಟಿ ನೀಡಲು ಇರುವ ನಿರ್ಬಂಧಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಡಿಲಗೊಳಿಸಿದೆ.
ಈ ಆದೇಶ ಇ-ವಿಸಾ, ಪ್ರವಾಸಿ ವೀಸಾ, ಎಲೆಕ್ಟ್ರಾನಿಕ್- ಅಲ್ಪಾವಧಿ ವೈದ್ಯಕೀಯ ವೀಸಾ ಮೇಲಿನ ನಿರ್ಬಂಧಗಳ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಈ ಹೊಸ ನೀತಿಯ ಅನ್ವಯ ಸಾಗರೋತ್ತರ ಭಾರತೀಯ ನಾಗರಿಕರು, ಭಾರತೀಯ ಮೂಲದ ವ್ಯಕ್ತಿ ಕಾರ್ಡ್ ಹೊಂದಿರುವವರು ಮತ್ತು ವಿದೇಶೀಯರು ಭಾರತಕ್ಕೆ ಭೇಟಿ ನೀಡಬಹುದಾಗಿದೆ. ಆದರೆ ಪ್ರವಾಸಿಗರು ಮತ್ತು ಅಲ್ಪಾವಧಿ ವೈದ್ಯಕೀಯ ಉದ್ದೇಶದ 60 ದಿನಗಳ ವೀಸಾ ಹೊಂದಿರುವವರು ಭಾರತಕ್ಕೆ ಭೇಟಿ ನೀಡಲು ಅವಕಾಶ ಇಲ್ಲ ಎಂದೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಉದ್ಯಮ, ಸಭೆ, ಅಧ್ಯಯನ, ವಿಚಾರ ಸಂಕಿರಣ, ಶಿಕ್ಷಣ, ಸಂಶೋಧನೆ ಮೊದಲಾದ ಉದ್ದೇಶಗಳಿಗೆ ವಿದೇಶಿಯರು ಭಾರತಕ್ಕೆ ಬರಬಹುದಾಗಿದೆ. ವೀಸಾ ಚಾಲ್ತಿಯಲ್ಲಿರುವವರು ನೇರವಾಗಿ ದೇಶಕ್ಕೆ ಬರಬಹುದು. ವೀಸಾ ಅವಧಿ ಮುಗಿದಿದ್ದರೆ ಸಂಬಂಧಿಸಿದಂತೆ ಇರುವ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಿ ವೀಸಾ ಪಡೆಯಲು ಅವಕಾಶ ನೀಡಲಾಗಿದೆ. ಭಾರತದಲ್ಲಿ ಚಿಕಿತ್ಸೆ ಪಡೆಯುವವರಿಗೂ ವೀಸಾ ನೀಡಲಾಗುತ್ತದೆ. ಆದರೆ ಆನ್ಲೈನ್ ಮೂಲಕ ವೀಸಾಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ. ದೇಶದ ಎಲ್ಲಾ ಅಂತರರಾಷ್ಟ್ರೀಯ ಮಾರ್ಗಗಳ ಮೂಲಕ ಭಾರತಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ. ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ವಿದೇಶಿಯರು ದೇಶಕ್ಕೆ ಬರಲು ಅವಕಾಶ ಇದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.