ನವದೆಹಲಿ: ಕೋವಿಡ್ ಲಸಿಕೆಗಳನ್ನು ತಯಾರಿಸುವಲ್ಲಿ ಭಾರತದ ಖಾಸಗಿ ಕಂಪನಿಗಳು ದೊಡ್ಡ ಪಾತ್ರವನ್ನು ವಹಿಸಲಿವೆ. ದೇಶದ ಪ್ರಬಲ ಮತ್ತು ದೃಢವಾದ ಖಾಸಗಿ ವಲಯದ ಪಾಲುದಾರರ ಮೂಲಕ ಕೋವಿಡ್ -19 ಲಸಿಕೆಗಳನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಸಾಧ್ಯತೆಯಿದೆ ಎಂದು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಭಾರತವು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸುಜ್ಮಾನ್ ಹೇಳಿದ್ದಾರೆ.
“ಭಾರತವು ಇದೀಗ ತನ್ನಲ್ಲಿನ ಸಂಪನ್ಮೂಲಗಳೊಂದಿಗೆ ಲಸಿಕೆ ಅಭಿವೃದ್ಧಿಗೆ ಎಲ್ಲವನ್ನೂ ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ, ಆದರೆ ಮುಂದಿನ ವರ್ಷ ಕೆಲವು ಲಸಿಕೆಗಳು ಹೊರಬರಬೇಕು ಎಂದು ನಾವೆಲ್ಲರೂ ಆಶಿಸುತ್ತೇವೆ. ಲಸಿಕೆಗಳ ಹೆಚ್ಚಿನ ಭಾಗವು ಬಲವಾದ ಮತ್ತು ದೃಢವಾದ ಭಾರತೀಯ ಖಾಸಗಿ ವಲಯದ ಪಾಲುದಾರರ ಮೂಲಕ ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ” ಎಂದಿದ್ದಾರೆ.
ಕೋವಿಡ್-19 ಲಸಿಕೆಗಳ ಸಮನಾದ ಜಾಗತಿಕ ವಿತರಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
“ಲಸಿಕೆಯನ್ನು ಸಮನವಾಗಿ ಜಾಗತಿಕ ಮಟ್ಟದಲ್ಲಿ ವಿತರಣೆ ಮಾಡುವ ಅವಶ್ಯಕತೆಯಿದೆ ಎಂದು ನಾವು ದೃಢವಾಗಿ ನಂಬುತ್ತೇವೆ, ಆದ್ದರಿಂದ ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮತ್ತು ಶ್ರೀಮಂತ ರಾಷ್ಟ್ರಗಳಿಗೆ ಒಂದೇ ಸಮಯದಲ್ಲಿ ಸಮಾಣ ಪ್ರಮಾಣದಲ್ಲಿ ಲಸಿಕೆ ದೊರಕುವುದನ್ನು ಖಚಿತಪಡಿಸಿಕೊಳ್ಳಲಿದ್ದೇವೆ. ಜಾಗತಿಕ ಸಾಂಕ್ರಾಮಿಕ ರೋಗ ನಿರ್ಮೂಲನೆಗೆ ಇದು ಅತ್ಯಗತ್ಯ. ವಿತರಣೆಯು ಕೆಲವು ಜಾಗತಿಕ ಶಿಫಾರಸುಗಳೊಂದಿಗೆ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಅವಲಂಬಿಸಿರುತ್ತದೆ “ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.