ನವದೆಹಲಿ: 2020-21 ವಿತ್ತ ವರ್ಷದ ಮೊದಲ ಆರು ತಿಂಗಳಲ್ಲಿ ಯುನೈಟೆಡ್ ಸ್ಟೇಟ್ಸ್ (ಯುಎಸ್) ಮತ್ತು ಚೀನಾಗೆ ಭಾರತದ ರಫ್ತು ಗಮನಾರ್ಹ ಏರಿಕೆಯನ್ನು ದಾಖಲಿಸಿದೆ ಮತ್ತು ಉಭಯ ರಾಷ್ಟ್ರಗಳಿಂದ ಆಮದು ಗಮನಾರ್ಹ ಕುಸಿತವನ್ನು ದಾಖಲಿಸಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್ ನಿಂದ ಸೆಪ್ಟೆಂಬರ್ ನಡುವಿನ ಮೊದಲ ಆರು ತಿಂಗಳಲ್ಲಿ ಚೀನಾಗೆ ಭಾರತದ ರಫ್ತು ಶೇ 26.3 ರಷ್ಟು ಏರಿಕೆಯಾಗಿದ್ದು, ಇದು 8.4 ಬಿಲಿಯನ್ ಡಾಲರ್ನಿಂದ 10.6 ಬಿಲಿಯನ್ ಡಾಲರ್ಗೆ ಏರಿದೆ. ಅಲ್ಲದೇ, ಇದೇ ಅವಧಿಯಲ್ಲಿ ಚೀನಾದಿಂದ ಆಮದು ಶೇ 24.5 ರಷ್ಟು ಕುಸಿತ ಕಂಡಿದ್ದು, 36.3 ಬಿಲಿಯನ್ ಡಾಲರ್ನಿಂದ 27.4 ಬಿಲಿಯನ್ ಡಾಲರ್ಗೆ ಇಳಿದಿದೆ.
ಅಂತೆಯೇ, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ತಿಂಗಳ ಸೆಪ್ಟೆಂಬರ್ನಲ್ಲಿ ಯುಎಸ್ಗೆ ಭಾರತದ ರಫ್ತು ಶೇ 15.5 ರಷ್ಟು ಏರಿಕೆಯಾಗಿದ್ದು, ಇದು 4.4 ಬಿಲಿಯನ್ ಡಾಲರ್ನಿಂದ 5.1 ಬಿಲಿಯನ್ ಡಾಲರ್ಗೆ ಏರಿದೆ. ಅಲ್ಲದೇ, ಇದೇ ಅವಧಿಯಲ್ಲಿ ಯುಎಸ್ನಿಂದ ಆಮದು ಶೇಕಡಾ 34.3 ರಷ್ಟು ಕುಸಿದಿದೆ, ಇದು 2.8 ಬಿಲಿಯನ್ ಡಾಲರ್ನಿಂದ 1.8 ಬಿಲಿಯನ್ ಡಾಲರ್ಗಳಿಗೆ ಇಳಿದಿದೆ.
ಚೀನಾ ಮತ್ತು ಯುಎಸ್ಗೆ ಭಾರತದ ರಫ್ತು ಹೆಚ್ಚಳವು ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಮತ್ತು ಆತ್ಮನಿರ್ಭರ ಭಾರತಕ್ಕೆ ದೊರೆತ ಉತ್ತೆಜನವಾಗಿದೆ. ಇದು ಇತರ ರಾಷ್ಟ್ರಗಳ ಮೇಲೆ ರಾಷ್ಟ್ರದ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಮತ್ತಷ್ಟು ಹತ್ತಿರ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.