ಇಂಗು ಬಳಸದ ಭಾರತೀಯ ಆಹಾರಗಳು ಇರುವುದು ಕಡಿಮೆ. ಇಂಗು ಬಳಸಿದ ಆಹಾರ ಸ್ವಾದಿಷ್ಟವಾಗಿಯೂ ಮತ್ತು ಆರೋಗ್ಯಪೂರ್ಣವಾಗಿಯೂ ಇರುತ್ತದೆ. ಆದರೆ ಇಲ್ಲಿಯವರೆಗೆ ಇಂಗು ವಿದೇಶಗಳಿಂದ ಭಾರತಕ್ಕೆ ಆಮದು ಆಗುತ್ತಿತ್ತು, ಭಾರತದಲ್ಲಿ ಅದನ್ನು ಬೆಳೆಸಲಾಗುತ್ತಿರಲಿಲ್ಲ. ಆದರೆ ಈಗ ಈ ಪ್ರವೃತ್ತಿ ಬದಲಾಗಲಿದೆ.
ಪಾಲಂಪೂರ್ನ ಸಿಎಸ್ಐಆರ್-ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋಸೋರ್ಸ್ ಟೆಕ್ನಾಲಜಿ (ಐಎಚ್ಬಿಟಿ) ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿಯೇ ಮೊದಲ ಬಾರಿಗೆ ಇಂಗು ಕೃಷಿ ಮಾಡಲು ಪ್ರಾರಂಭಿಸಿದೆ.
ಭಾರತ ಏಕೆ ಇಂಗನ್ನು ಬೆಳೆಯಲಾಗುತ್ತಿಲ್ಲ ಎಂಬ ವಿಷಯದ ಕುರಿತು ಮಾತನಾಡಿದ ದೆಹಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಆರ್) ನ ಮಹಾನಿರ್ದೇಶಕ ಡಾ.ಶೇಖರ್ ಮಾಂಡೆ, “ನಾವು ಸ್ಥಳೀಯವಾಗಿ ಬೆಳೆಯುವ ಇಂಗಿನ ಕುರಿತು 2016 ರಿಂದ ಸಂಶೋಧನೆ ಪ್ರಾರಂಭಿಸಿದ್ದೇವೆ. ಇಂಗನ್ನು ತುಂಬಾ ಶೀತ ಮತ್ತು ಕೆಲವು ಭೌಗೋಳಿಕ ಹವಾಮಾನ ಪ್ರದೇಶಗಳಲ್ಲಿ ಮಾತ್ರ ಬೆಳೆಯಬಹುದು. ಲಡಾಖ್ ಮತ್ತು ಲಾಹೌಲ್-ಸ್ಪಿತಿ ಇದಕ್ಕೆ ಉತ್ತಮ ಸ್ಥಳ. ಇದಕ್ಕೆ ಮೊದಲು, ಇದನ್ನು ಅಫ್ಘಾನಿಸ್ಥಾನ ಮತ್ತು ಇರಾನ್ನಂತಹ ದೇಶಗಳಿಂದ ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿತ್ತು” ಎಂದಿದ್ದಾರೆ.
ಸಂಸ್ಥೆಯ ನಿರ್ದೇಶಕ ಡಾ.ಸಂಜಯ್ ಕುಮಾರ್ ಅವರು ಹಿಮಾಚಲ ಪ್ರದೇಶದ ಶೀತ-ಒಣ ಜಿಲ್ಲೆ ಲಾಹೌಲ್ನ ಕ್ವಾರಿಂಗ್ ಗ್ರಾಮದಲ್ಲಿ ಮತ್ತು ಸ್ಪಿತಿಯಲ್ಲಿ ಇಂಗು ಮೊಳಕೆಯನ್ನು ನೆಡುವ ಮೂಲಕ ಕೃಷಿಯನ್ನು ಪ್ರಾರಂಭಿಸಿದ್ದಾರೆ.
ಇಂಗು ಬಳಕೆ ನಮ್ಮ ದೇಶದಲ್ಲಿ ಅತಿ ಹೆಚ್ಚು, ಆದರೆ ಅದು ಇನ್ನೂ ಭಾರತದಲ್ಲಿ ಉತ್ಪಾದನೆಯಾಗುತ್ತಿಲ್ಲ. ಪೂರೈಕೆಗಾಗಿ ನಾವು ಇತರ ರಾಷ್ಟ್ರಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದೇವೆ. 600 ಕೋಟಿ ರೂ.ಗಳ ಮೌಲ್ಯದ ಸುಮಾರು 1,200 ಮೆಟ್ರಿಕ್ ಟನ್ ಕಚ್ಚಾ ಇಂಗನ್ನು ಅಫ್ಘಾನಿಸ್ಥಾನ, ಇರಾನ್, ಉಜ್ಬೇಕಿಸ್ಥಾನದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ” ಎಂದಿದ್ದಾರೆ.
“ನಾವು ಹಿಮಾಚಲ ಪ್ರದೇಶದ ಸುಮಾರು 5 ಹೆಕ್ಟೇರ್ ಭೂಮಿಯಲ್ಲಿ ಸಸಿಗಳನ್ನು ನೆಟ್ಟಿದ್ದೇವೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ 300 ಹೆಕ್ಟೇರ್ ಭೂಮಿಯಲ್ಲಿ ನಾಟಿ ಮಾಡಿ ಇಂಗು ಉತ್ಪಾದನೆಯನ್ನು ಹೆಚ್ಚಿಸಲು ನಾವು ಯೋಜಿಸಿದ್ದೇವೆ” ಎಂದು ಡಾ ಮಾಂಡೆ ಹೇಳಿದರು.
ವಿಶ್ವದ ಇಂಗು ಉತ್ಪಾದನೆಯ ಶೇಕಡಾ 40 ರಷ್ಟು ಭಾರತ ಬಳಸುತ್ತದೆ. ರಾಜ್ಯ ಸರ್ಕಾರವು ನೀಡಿದ 4 ಕೋಟಿ ರೂ ಹಣವನ್ನು ಬಳಸಿಕೊಂಡು ಐಎಚ್ಬಿಟಿ ಟಿಶ್ಯೂ ಕಲ್ಚರ್ ಲ್ಯಾಬ್ ಅನ್ನು ಸ್ಥಾಪಿಸಿದ್ದು, ಅದು ಲಕ್ಷಾಂತರ ಸಸಿಗಳನ್ನು ಶೀಘ್ರವಾಗಿ ಬೆಳೆಯಬಲ್ಲದು.
ಭಾರತೀಯ ಪಾಕಪದ್ಧತಿಯಲ್ಲಿ ಅಸಫೊಟಿಡಾ ಅಥವಾ ಇಂಗು ಒಂದು ಪ್ರಮುಖ ಅಂಶ ಆಗಿರುವುದರಿಂದ, ಸಿಎಸ್ಐಆರ್-ಐಎಚ್ಬಿಟಿ ತಂಡವು ದೇಶದಲ್ಲಿ ಈ ಪ್ರಮುಖ ಬೆಳೆ ಪರಿಚಯಿಸಲು ಸತತ ಪ್ರಯತ್ನಗಳನ್ನು ಮಾಡಿತು. ಇನ್ಸ್ಟಿಟ್ಯೂಟ್ 2018 ರ ಅಕ್ಟೋಬರ್ನಲ್ಲಿ ನವದೆಹಲಿಯ ಐಸಿಎಆರ್-ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್ (ಐಸಿಎಆರ್-ಎನ್ಬಿಪಿಜಿಆರ್) ಮೂಲಕ ಇರಾನ್ನಿಂದ ಆರು ಬೀಜಗಳನ್ನು ತಂದು ಭಾರತದಲ್ಲಿ ಪರಿಚಯಿಸಿದೆ.
ಐಸಿಎಆರ್-ಎನ್ಬಿಪಿಜಿಆರ್ ಕಳೆದ 30 ವರ್ಷಗಳಲ್ಲಿ ದೇಶದಲ್ಲಿ ಆಸಾಫೈಟಿಡಾ (ಫೆರುಲಾ ಅಸ್ಸಾ-ಫೊಯ್ಟಿಡಾ) ಬೀಜಗಳನ್ನು ಪರಿಚಯಿಸಲು ಮಾಡಿದ ಮೊದಲ ಪ್ರಯತ್ನ ಇದಾಗಿತ್ತು. ಸಿಎಸ್ಐಆರ್-ಐಎಚ್ಬಿಟಿ ಎನ್ಬಿಪಿಜಿಆರ್ ಕಣ್ಗಾವಲು ಅಡಿಯಲ್ಲಿ CeHAB, ರಿಬ್ಲಿಂಗ್, ಲಾಹೌಲ್ ಸ್ಪಿತಿಯಲ್ಲಿ ಹಿಂಗು ಸಸ್ಯಗಳನ್ನು ಬೆಳೆಸಿತು.
ಸಸ್ಯವು ಅದರ ಬೆಳವಣಿಗೆಗೆ ಶೀತ ಮತ್ತು ಶುಷ್ಕ ಪರಿಸ್ಥಿತಿಗಳನ್ನು ಆದ್ಯತೆ ನೀಡುತ್ತದೆ ಮತ್ತು ಅದರ ಬೇರುಗಳಲ್ಲಿ ಒಲಿಯೊ-ಗಮ್ ರಾಳದ ಉತ್ಪಾದನೆಗೆ ಸುಮಾರು ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ, ಭಾರತೀಯ ಹಿಮಾಲಯನ್ ಪ್ರದೇಶದ ಶೀತ ಮರುಭೂಮಿ ಪ್ರದೇಶಗಳು ಆಸ್ಫೊಟಿಡಾ ಕೃಷಿಗೆ ಸೂಕ್ತವಾಗಿವೆ.
ಅಸಫೊಯೆಟಿಡಾ ಉನ್ನತ ಖಾದ್ಯಗಳಲ್ಲಿ ಒಂದಾಗಿದೆ ಮತ್ತು ಇದು ಭಾರತದಲ್ಲಿ ಹೆಚ್ಚಿನ ಮೌಲ್ಯದ ಮಸಾಲೆ ಬೆಳೆಯಾಗಿದೆ. ಭಾರತದಲ್ಲಿ ಫೆರುಲಾ ಅಸ್ಸಾ-ಫೊಯ್ಟಿಡಾ ಸಸ್ಯಗಳ ನೆಕೊರತೆಯು ಈ ಬೆಳೆಯ ಕೃಷಿಯಲ್ಲಿ ಪ್ರಮುಖ ಅಡಚಣೆಯಾಗಿದೆ. ಆದರೀಗ ಇಂಗು ಭಾರತದಲ್ಲೇ ಬೆಳೆಯುವ ಕಾಲ ಕೂಡಿ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.