ನವದೆಹಲಿ: ಪ್ರಸ್ತುತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಭಾರತದ ಕೃಷಿ ರಫ್ತು 14.8% ವೃದ್ಧಿಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸಾಂಕ್ರಾಮಿಕ ರೋಗದ ಹೊಡೆತದಿಂದ ಭಾರತದ ಕೃಷಿ ರಫ್ತು ಈಗ ಚೇತರಿಕೆಯನ್ನು ಕಾಣುತ್ತಿದೆ.
2020-21ರ ಎಪ್ರಿಲ್ ಮತ್ತು ಆಗಸ್ಟ್ ನಡುವೆ ಭಾರತದ ಪ್ರಮುಖ ಕೃಷಿ ಉತ್ಪನ್ನಗಳ ರಫ್ತು ಮೌಲ್ಯ 53 ಸಾವಿರ ಕೋಟಿ ರೂಪಾಯಿ ಆಗಿದೆ. ಕಳೆದ ಹಣಕಾಸು ವರ್ಷದ ಈ ಅವಧಿಗೆ ಹೋಲಿಸಿದರೆ ರಫ್ತು 14.8% ಹೆಚ್ಚಾಗಿದೆ.
ಎಪ್ರಿಲ್ ಮತ್ತು ಆಗಸ್ಟ್ ಅವಧಿಯಲ್ಲಿ ಅಕ್ಕಿ, ಗೋಧಿ ಮತ್ತು ಸಕ್ಕರೆಗಳ ಹೆಚ್ಚಿನ ರಫ್ತಿನ ಕಾರಣದಿಂದಾಗಿ ರೈತರು ಆದಾಯ ಗಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಾಸ್ಮತಿ ಅಕ್ಕಿ, ಆಹಾರಧಾನ್ಯಗಳ ರಫ್ತು ಎಪ್ರಿಲ್ ಆಗಸ್ಟ್ ತಿಂಗಳಲ್ಲಿ 8.2% ಹೆಚ್ಚಾಗಿದೆ. ಬಾಸ್ಮತಿ ಅಲ್ಲದ ಅಕ್ಕಿಗಳ ರಫ್ತು 91.3% ಏರಿಕೆ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.