ನವದೆಹಲಿ: ಬಿಎಸ್-VI-ಕಂಪ್ಲೈಂಟ್ ವೆಹ್ಹಿಕಲ್ ಸ್ಟ್ಯಾಂಡರ್ಡ್ ಅನ್ನು ಪರಿಚಯಿಸಿದ್ದು ವಾಹನಗಳ ಮಾಲಿನ್ಯ ತಗ್ಗಿಸುವಲ್ಲಿ ಒಂದು ಕ್ರಾಂತಿಕಾರಕ ಹೆಜ್ಜೆ, ಇದು ಇಂಗಾಲದ ಹೊರಸೂಸುವಿಕೆಯನ್ನು ಶೇಕಡಾ 60 ರಷ್ಟು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
“ಬಿಎಸ್-VI ಮಾನದಂಡಕ್ಕೆ ಪರಿವರ್ತನೆಗೊಳ್ಳುವುದು ವಾಹನ ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ” ಎಂದು ಅವರು ಹೇಳಿದ್ದಾರೆ.
ಫೇಸ್ಬುಕ್ ಲೈವ್ ಕಾರ್ಯಕ್ರಮವೊಂದರಲ್ಲಿ ಜನರೊಂದಿಗೆ ಸಂವಹನ ನಡೆಸಿದ ಜಾವಡೇಕರ್, ದೇಶದಲ್ಲಿ ಬಿಎಸ್-VI ಜಾರಿಗೆ ಸರ್ಕಾರ ಬೃಹತ್ ನಿರ್ಧಾರ ತೆಗೆದುಕೊಂಡಿದ್ದು, ಇದು ಮಾಲಿನ್ಯ ಕಡಿಮೆಯಾಗಲು ಕಾರಣವಾಗುತ್ತದೆ ಎಂದಿದ್ದಾರೆ.
ಬಿಎಸ್-IVಗೆ ಹೋಲಿಸಿದರೆ ಬಿಎಸ್-VI ಮಾಲಿನ್ಯವನ್ನು ಹೆಚ್ಚು ಕಡಿಮೆಗೊಳಿಸುವುದರಿಂದ ಈ ವಾಹನಗಳನ್ನು ಮಾತ್ರ ಮಾರುಕಟ್ಟೆಗಳಲ್ಲಿ ಲಭ್ಯವಿರುವಂತೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಬಿಎಸ್-VI ಇಂಧನವು ಡೀಸೆಲ್ ಕಾರುಗಳಲ್ಲಿ NOx ಹೊರಸೂಸುವಿಕೆಯನ್ನು 70% ರಷ್ಟು ಕಡಿಮೆ ಮಾಡುತ್ತದೆ ಮತ್ತು ಪೆಟ್ರೋಲ್ ಕಾರುಗಳಲ್ಲಿ ಹೊರಸೂಸುವಿಕೆಯನ್ನು 25% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ವಾಹನಗಳಲ್ಲಿನ ಕಣಕಣಗಳನ್ನು (ಪಿಎಂ) 80% ರಷ್ಟು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದಿದ್ದಾರೆ.
It was a wonderful interaction on #FacebookLIVE with all. Transition to BS-VI standard is another revolutionary step in mitigation of vehicular pollution. BS-VI fuel reduces NOx emission by 70% in diesel cars, by 25% in petrol cars & reduces particulate matter in vehicles by 80%. pic.twitter.com/WmQcuGXT18
— Prakash Javadekar (@PrakashJavdekar) October 18, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.