ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲೀಲಾದ ನೇರ ಪ್ರಸಾರ ಕಾರ್ಯಕ್ರಮವನ್ನು ರಾಷ್ಟ್ರೀಯ ಪ್ರಸಾರಕ ದೂರದರ್ಶನ ಯೂಟ್ಯೂಬ್ನಲ್ಲಿ ಲೈವ್ ನೀಡುತ್ತಿದ್ದು, ಮೊದಲ ದಿನದ ಕಾರ್ಯಕ್ರಮವನ್ನು ಕೇವಲ 21 ಗಂಟೆಗಳಲ್ಲಿ 7 ಲಕ್ಷದ 36 ಸಾವಿರದ 741 ಮಂದಿ ವೀಕ್ಷಣೆ ಮಾಡಿದ್ದಾರೆ. ಒಟ್ಟಾರೆ ಈವರೆಗೆ ಮೊದಲ ದಿನದ ಕಾರ್ಯಕ್ರಮವನ್ನು 1,019,753 ಮಂದಿ ಒಂದು ದಿನದಲ್ಲಿ ವೀಕ್ಷಿಸಿದ್ದಾರೆ.
ನವರಾತ್ರಿಯ ಸಂದರ್ಭದಲ್ಲಿ ಪ್ರಭು ಶ್ರೀರಾಮನ ಜೀವನ ದರ್ಶನವನ್ನು ಭಕ್ತಾದಿಗಳ ಮುಂದೆ ರಾಮಲೀಲಾ ಕಾರ್ಯಕ್ರಮದ ಮೂಲಕ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಸಾದರಪಡಿಸಲಾಗುತ್ತದೆ. ಈ ಬಾರಿ ಕೊರೋನಾ ಸಂಕಷ್ಟದ ಕಾರಣ ದೂರದರ್ಶನ ಮತ್ತು ಯೂಟ್ಯೂಬ್ಗಳಲ್ಲಿ ರಾಮಲೀಲಾವನ್ನು ನೇರ ಪ್ರಸಾರ ಮಾಡಲಾಗುತ್ತಿದ್ದು ಮೊದಲ ದಿನದ ನೇರ ಪ್ರಸಾರವನ್ನು 1 ಕೋಟಿಗೂ ಅಧಿಕ ಜನರು ವೀಕ್ಷಣೆ ಮಾಡಿ ಪುನೀತರಾಗಿದ್ದಾರೆ.
ನವರಾತ್ರಿಯ ಸಂದರ್ಭದಲ್ಲಿ ರಾಮಲೀಲಾ ಪ್ರದರ್ಶನ ಪ್ರತಿ ವರ್ಷವೂ ಅಯೋಧ್ಯೆಯಲ್ಲಿ ನಡೆಯುತ್ತದೆ. ಈ ಬಾರಿ ಅಕ್ಟೋಬರ್ 17 ರಂದು ರಾಮಲೀಲಾ ಪ್ರದರ್ಶನ ಆರಂಭವಾಗಿದ್ದು ಅಕ್ಟೋಬರ್ 25ರ ವರೆಗೆ ನಡೆಯಲಿದೆ. ಈ ದಿನಗಳಲ್ಲಿ ರಾತ್ರಿ 7 ಗಂಟೆಯ ಬಳಿಕ ಕಾರ್ಯಕ್ರಮದ ನೇರಪ್ರಸಾರ ನಡೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.