ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಜ್ಜಾಗುತ್ತಿದ್ದಾರೆ, ಚುನಾವಣಾ ಹಂತದಲ್ಲಿ ಅವರು ಆ ರಾಜ್ಯದಲ್ಲಿ 12 ರ್ಯಾಲಿಗಳನ್ನು ನಡೆಸಲಿದ್ದಾರೆ. ಬಿಹಾರಕ್ಕೆ ಬಿಜೆಪಿ ಚುನಾವಣಾ ಉಸ್ತುವಾಯಾಗಿರುವ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಪ್ರಧಾನ ಮಂತ್ರಿಗಳ ವೇಳಾಪಟ್ಟಿಯನ್ನು ಖಚಿತಪಡಿಸಿದ್ದಾರೆ.
ಈ ಹೆಚ್ಚಿನ ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಜರಾಗಲಿದ್ದಾರೆ. ಎನ್ಡಿಎಯ ಬಿಹಾರದ ಇತರ ಹಿರಿಯ ನಾಯಕರಾದ ಸುಶೀಲ್ ಮೋದಿ, ಜೀತನ್ ರಾಮ್ ಮಾಂಝಿ ಕೂಡ ರಾಜ್ಯದಲ್ಲಿ ನಡೆಯಲಿರುವ ಪ್ರಧಾನಿ ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಅಕ್ಟೋಬರ್ 23ರಂದು ಸಸಾರಂ, ಗಯಾ ಮತ್ತು ಭಾಗಲ್ಪುರ್ ಕ್ಷೇತ್ರಗಳಲ್ಲಿ ಮೋದಿಯವರ ರ್ಯಾಲಿ ನಡೆಯಲಿದೆ. ಅಕ್ಟೋಬರ್ 2ರಂದು ದರ್ಭಂಗಾ, ಮುಜಾಫರ್ಪುರ್ ಮತ್ತು ಪಾಟ್ನಾದಲ್ಲಿ ನಡೆಯಲಿದೆ. ನವೆಂಬರ್ 1ರಂದು ಚಹಾಪ್ರಾ, ಪೂರ್ವ ಚಂಪಾರಣ್ ಮತ್ತು ಸಮಸ್ತಿಪುರದಲ್ಲಿ ನಡೆಯಲಿದೆ. ನವೆಂಬರ್ 3ರಂದು ಪಶ್ಚಿಮ ಚಂಪಾರನ್, ಸಹರ್ಸಾ ಮತ್ತು ಅರಿಯಾದಲ್ಲಿ ನಡೆಯಲಿದೆ.
ವರದಿಗಳ ಪ್ರಕಾರ, ಪ್ರಧಾನಿ ಮೋದಿಯವರ ರ್ಯಾಲಿಗಳು ಹೆಚ್ಚಿನ ಜನರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ನಾಲ್ಕು ಲಕ್ಷ ಪಕ್ಷದ ಕಾರ್ಯಕರ್ತರು ಮತ್ತು ಸುಮಾರು 10,000 ಸೋಷಿಯಲ್ ಮೀಡಿಯಾ ‘ಕಮಾಂಡೋಗಳು’ ಸಿದ್ಧಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.