ನವದೆಹಲಿ: ಭಾರತವನ್ನು ಸುರಕ್ಷಿತವಾಗಿಡುತ್ತಿರುವ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(ಎನ್ಎಸ್ಜಿ) ಅಕ್ಟೋಬರ್ 15ರಂದು ಸಂಸ್ಥಾಪನಾ ದಿನವನ್ನು ಅಚರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎನ್ಎಸ್ಜಿ ಸಲ್ಲಿಸುತ್ತಿರುವ ಕಾರ್ಯವನ್ನು ಕೊಂಡಾಡಿದ್ದಾರೆ.
ಭಾರತವನ್ನು ಸುರಕ್ಷಿತ ಮತ್ತು ಸುಭದ್ರವಾಗಿಡಲು ಎನ್ಎಸ್ಜಿ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ದೇಶ ಹೆಮ್ಮೆಪಡುತ್ತದೆ ಎಂದು ಮೋದಿ ಹೇಳಿದ್ದಾರೆ.
“ಸ್ಥಾಪನಾ ದಿನದಂದು ಎನ್ಎಸ್ಜಿ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಭಾರತದ ಭದ್ರತೆಯಲ್ಲಿ NSG ನಿರ್ಣಾಯಕ ಪಾತ್ರ ವಹಿಸುತ್ತದೆ. ಅದಮ್ಯ ಧೈರ್ಯ ಮತ್ತು ವೃತ್ತಿಪರತೆಗೆ ಅದು ಹೆಸರಾಗಿದೆ. ಭಾರತವನ್ನು ಸುರಕ್ಷಿತವಾಗಿ ಮತ್ತು ಭದ್ರವಾಗಿಡಲು NSG ಯ ಪ್ರಯತ್ನಗಳ ಬಗ್ಗೆ ಭಾರತ ಹೆಮ್ಮೆಪಡುತ್ತದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರೀಯ ಸಂಸ್ಥೆಯಾಗಿರುವ ಎನ್ಎಸ್ಜಿ ಒಂದು ಗಣ್ಯ ಭಯೋತ್ಪಾದನಾ ವಿರೋಧಿ ಶಕ್ತಿಯಾಗಿದ್ದು, ಇದನ್ನು ಅಸಾಧಾರಣ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
ಎನ್ಎಸ್ಜಿ (ರಾಷ್ಟ್ರೀಯ ಭದ್ರತಾ ಪಡೆ ಅಥವಾ ನ್ಯಾಷನಲ್ ಸೆಕುರಿಟಿ ಗಾರ್ಡ್ಸ್ ಅಥವಾ ಬ್ಲ್ಯಾಕ್ ಕ್ಯಾಟ್ ಕಮಾಂಡೋಸ್) ಇದು ವಿಶೇಷ ಸಂದರ್ಭಗಳಲ್ಲಿ ಬಳಸಲಾಗುವ ಉಗ್ರವಾದ-ನಿಗ್ರಹ ದಳವಾಗಿದ್ದು, ಇದನ್ನು 1985ರಲ್ಲಿ ಸಂಸತ್ತಿನಲ್ಲಿ ‘ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್’ ಆಕ್ಟ್ ಮೂಲಕ ರಚಿಸಲಾಯಿತು.
On their Raising Day, greetings to @nsgblackcats personnel and their families. NSG plays a crucial role in India’s security apparatus. It has been associated with utmost courage and professionalism. India is proud of NSG’s efforts to keep India safe and secure.
— Narendra Modi (@narendramodi) October 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.