ನವದೆಹಲಿ: ಹೆಚ್ಚಿನ ಮಟ್ಟದಲ್ಲಿ ಗ್ರಾಹಕರನನು ಆಕರ್ಷಿಸುವ ನಿಟ್ಟಿನಲ್ಲಿ ಇಂಟರ್ನೆಟ್ ದೈತ್ಯ ಗೂಗಲ್, ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್ನ ಆ್ಯಪ್ಗಳನ್ನು ರೂ.10ಕ್ಕೆ ಮಾರಾಟ ಮಾಡಲು ನಿಶ್ಚಯಿಸಿದೆ. ಈವರೆಗೆ ದೊರೆಯುತ್ತಿದ್ದ ಉಚಿತ ಆ್ಯಪ್ಗಳನ್ನು ಹೊರತುಪಡಿಸಿ ಕೆಲವು ಆ್ಯಪ್ಗಳು ರೂ.50ಕ್ಕೆ ಲಭ್ಯವಾಗುತ್ತಿದ್ದವು.
ಈ ಆ್ಯಪ್ಗಳಲ್ಲಿ ದೊರಕುವ ಉತ್ಪನ್ನಗಳ ದರವನ್ನು ರೂ.10ಕ್ಕೆ ಇಳಿಸುವ ಮೂಲಕ ಭಾರತದಲ್ಲಿನ ಹೆಚ್ಚಿನ ಸಂಖ್ಯೆಯ ಗ್ರಾಹರನ್ನು ತಲುಪಲು ಸಾಧ್ಯವಿದ್ದು, ಇದನ್ನು ಇಳಿಸುವ ಮೂಲಕ ಹೆಚ್ಚಿನ ವ್ಯವಹಾರಗಳು ನಡೆಸಲು ಸಾಧ್ಯ ಎಂದು ಗೂಗಲ್ ಪ್ಲೇ ಉತ್ಪನ್ನಗಳ ನಿರ್ವಾಹಕ ಅಲಿಸ್ಟೇರ್ ಪಾಟ್ ಹೇಳಿದ್ದಾರೆ.
ಗೂಗಲ್ ಪ್ಲೇ ಅಭಿವೃದ್ಧಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ತಲುಪುವ ಉದ್ದೇಶದಿಂದ ಈ ಯೋಜನೆ ಮಾಡಲಾಗಿದ್ದು, ಭಾರತದಲ್ಲಿನ ಗೂಗಲ್ ಪ್ಲೇ ಗ್ರಾಹಕರು ಹಾಗೂ ಡೆವೆಲಪರ್ಗಳು ಹೆಚ್ಚಿನ ಮಟ್ಟಿನ ಲಾಭ ಪಡೆಯುವಂತಾಗಬೇಕು ಎಂದು ಪಾಟ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.