ಗುವಾಹಟಿ: ಅನ್ಯಧರ್ಮೀಯ ಯುವಕರು ತಮ್ಮ ಧಾರ್ಮಿಕ ಗುರುತನ್ನು ಮುಚ್ಚಿಟ್ಟು ಹಿಂದೂ ಯುವತಿಯರನ್ನು ಮದುವೆಯಾಗುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಬಗ್ಗೆ ಮಾಹಿತಿಯನ್ನು ನೀಡಿರುವ ಅಸ್ಸಾಂ ಹಣಕಾಸು ಮತ್ತು ಆರೋಗ್ಯ ಸಚಿವ ಹಿಮಂತ ಬಿಸ್ವ ಸರ್ಮ ಅವರು, “ಅಸ್ಸಾಂನಲ್ಲಿ ಪ್ರಸ್ತುತ 2-3 ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅನೇಕ ಮಂದಿ ಮುಸ್ಲಿಂ ಯುವಕರು ಹಿಂದೂ ಹೆಸರಿನಲ್ಲಿ ಫೇಸ್ಬುಕ್ ಅಕೌಂಟ್ ಸೃಷ್ಟಿ ಮಾಡುತ್ತಿದ್ದಾರೆ ಮತ್ತು ಅದರಲ್ಲಿ ದೇಗುಲಗಳ ಫೋಟೋ ಅಪ್ಲೋಡ್ ಮಾಡುತ್ತಾರೆ. ಅಂತವರನ್ನು ಪರಿಚಯ ಮಾಡಿಕೊಂಡು ಹಿಂದೂ ಯುವತಿ ಮದುವೆಯಾಗುತ್ತಾಳೆ. ಮದುವೆಯಾದ ಬಳಿಕವೇ ಅವಳಿಗೆ ಆತ ಅನ್ಯಧರ್ಮೀಯ ಎಂಬುದು ತಿಳಿದುಬರುತ್ತದೆ. ಇದು ನಂಬಿಕೆಯ ಉಲ್ಲಂಘನೆಯಾಗಿದೆ” ಎಂದಿದ್ದಾರೆ.
ನಮ್ಮ ಸರಕಾರ ಯಾವುದೇ ರೀತಿಯಲ್ಲೂ ಅಂತರ್ಧರ್ಮೀಯ ಮದುವೆಗೆ ವಿರುದ್ಧ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಧರ್ಮದ ಗುರುತು ಮುಚ್ಚಿಟ್ಟು ಉದ್ದೇಶಪೂರ್ವಕವಾಗಿ ಮದುವೆಯಾಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಇಂತಹ ಕೃತ್ಯ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲು ನಾವು ಮುಂದಾಗಿದ್ದೇವೆ ಎಂದಿದ್ದಾರೆ. ಇಂತಹ ಮದುವೆಗಳನ್ನು ವಂಚನೆಯ ಮದುವೆ ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.