ನವದೆಹಲಿ: ದೇಶದ ಶೇ.37ರಷ್ಟು ಸಣ್ಣ ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ ಎಂಬ ಅಘಾತಕಾರಿ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ವರದಿಯನ್ನು ಶುಕ್ರವಾರ ಸಂಸದೀಯ ಸ್ಥಾಯಿ ಸಮಿತಿ ಗೃಹ ಇಲಾಖೆಯ ಮುಂದಿಟ್ಟಿದೆ.
ಗುಪ್ತಚರ ಇಲಾಖೆಯ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಬಂದರುಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ಪ್ರದೇಶದಲ್ಲಿರುವ ಸಣ್ಣ ಬಂದರುಗಳಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಬೇಕು. ಇಲ್ಲವಾದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಮಿತಿ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಸುಮಾರು 203 ಸಣ್ಣ ಬಂದರುಗಳಿವೆ, ಇದರಲ್ಲಿ 45 ಕಾರ್ಯಾಚರಣೆ ಸ್ಥಿಗಿತಗೊಳಿಸಿದೆ. 75 ಬಂದರುಗಳಲ್ಲಿ ಯಾವ ರೀತಿಯ ರಕ್ಷಣಾ ವ್ಯವಸ್ಥೆ ಇಲ್ಲ. ಇದರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರದ 30 ಬಂದರುಗಳಿವೆ ಎಂದು ವರದಿ ಹೇಳಿದೆ.
ಸಮುದ್ರ ಮಾರ್ಗವಾಗಿಯೇ ಉಗ್ರರು ಬಂದು ಮುಂಬಯಿ ಮೇಲೆ ದಾಳಿ ನಡೆಸಿದ್ದರೂ, ಈ ಘಟನೆ ನಡೆದ ಬಳಿಕವೂ ನಮ್ಮ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂಬುದು ಈ ವರದಿಯಿಂದ ಸಾಬೀತಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳುವವರೆಗೂ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.