ನವದೆಹಲಿ: ಇಂದು ರಾಷ್ಟ್ರ ಕಂಡ ಮಹಾನ್ ವಿಜ್ಞಾನಿ, ಅದ್ಭುತ ಶಿಕ್ಷಕ, ಜನರ ರಾಷ್ಟ್ರಪತಿ, ಅಪ್ರತಿಮ ದೇಶಭಕ್ತ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನ. ಯುವ ಪೀಳಿಗೆಗೆ ಪ್ರೇರಣಾದಾಯಿ ಆಗಿರುವ ಕಲಾಂ ಅವರ ಜನ್ಮದಿನವನ್ನು ವಿವಿಧ ರೀತಿಗಳಲ್ಲಿ ಇಂದು ಸ್ಮರಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರೂ ಟ್ವಿಟರ್ನಲ್ಲಿ ಸುಂದರವಾದ ವಿಡಿಯೋ ಅನ್ನು ಹಂಚಿಕೊಂಡು ಕಲಾಂ ಅವರ ಶ್ರೇಷ್ಠತೆಯನ್ನು ಸ್ಮರಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಡಾ.ಕಲಾಂ ಅವರ ಜಯಂತಿಯಂದು ಅವರಿಗೆ ಗೌರವ. ವಿಜ್ಞಾನಿಯಾಗಿ ಮತ್ತು ಭಾರತದ ರಾಷ್ಟ್ರಪತಿಯಾಗಿ, ರಾಷ್ಟ್ರೀಯ ಅಭಿವೃದ್ಧಿಗೆ ಅವರು ನೀಡಿದ ಅಳಿಸಲಾಗದ ಕೊಡುಗೆಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಜೀವನ ಪಯಣ ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ.” ಎಂದಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಟ್ವಿಟ್ ಮಾಡಿ, “ಭಾರತ ರತ್ನ ಡಾ.ಪಿ.ಜೆ.ಅಬ್ದುಲ್ ಕಲಾಂ ಅವರ ಜಯಂತಿಯ ಸ್ಮರಣೆಗಳು. ಭಾರತದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ದೂರದೃಷ್ಟಿಯ ನಾಯಕ ಮತ್ತು ಶಿಲ್ಪಿ, ಅವರು ಸದಾ ಬಲಿಷ್ಠ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಬಯಸಿದ್ದರು. ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಪರಂಪರೆ ಸ್ಫೂರ್ತಿಯ ಸೆಲೆಯಾಗಿದೆ” ಎಂದಿದ್ದಾರೆ.
Tributes to Dr. Kalam on his Jayanti. India can never forget his indelible contribution towards national development, be it as a scientist and as the President of India. His life journey gives strength to millions. pic.twitter.com/5Evv2NVax9
— Narendra Modi (@narendramodi) October 15, 2020
Remembering Bharat Ratna Dr. APJ Abdul Kalam on his jayanti. A visionary leader and architect of India’s space & missile programmes, who always wanted to build a strong and self-reliant India. His immortal legacy in the field of science and education is an epitome of inspiration. pic.twitter.com/QzPW7IDMWs
— Amit Shah (@AmitShah) October 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.