ನವದೆಹಲಿ: ಗಿಲ್ಗಿಟ್ ಬಲ್ಟಿಸ್ತಾನದಲ್ಲಿ ಪಾಕಿಸ್ಥಾನದ ವಿರುದ್ಧ ಜನರ ಆಕ್ರೋಶ ಭುಗಿಲೇಳುತ್ತಿದೆ. ತಮ್ಮ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಪಾಕಿಸ್ಥಾನದ ವಿರುದ್ಧ ಅಲ್ಲಿನ ಜನರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಪಾಕಿಸ್ಥಾನ ಅಲ್ಲಿನ ಸಾಕಷ್ಟು ಹೋರಾಟಗಾರರನ್ನು ಬಂಧನಕ್ಕೆ ಒಳಪಡಿಸಿರುವುದು ಅಲ್ಲಿನ ಜನರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಹಕ್ಕು ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲೇ, ಗಿಲ್ಗಿಟ್ ಬಲ್ಟಿಸ್ತಾನದ ರಾಜಕೀಯ ಸ್ಥಾನಮಾನವನ್ನು ಬದಲಾಯಿಸಲು ಇಸ್ಲಾಮಾಬಾದ್ ಪ್ರಯತ್ನಿಸುವುದರ ವಿರುದ್ಧವೂ ಪ್ರತಿಭಟನೆ ನಡೆಸಿದ್ದಾರೆ.
“ಎಲ್ಲಾ ಕಾರ್ಯಕರ್ತರನ್ನು ಸೆರೆಮನೆಗಳಿಂದ ಬಿಡುಗಡೆ ಮಾಡುವವರೆಗೆ ನಾವು ಸುಮ್ಮನಿರುವುದಿಲ್ಲ. ನಾವೆಲ್ಲರೂ ಬಂಧನಕ್ಕೆ ಒಳಗಾಗಲು ಸಿದ್ಧರಾಗಿದ್ದೇವೆ. ನಮ್ಮ ನಾಯಕರ ಮುಂದಿನ ನಡೆಗಾಗಿ ನಾವು ಕಾಯುತ್ತಿದ್ದೇವೆ. ಅವರು ಕರೆ ನೀಡಿದಾಗ ನಾವು ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ನಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತೇವೆ. ಅಗತ್ಯವಿದ್ದರೆ ನಾವು ಮುಷ್ಕರ ನಡೆಸುತ್ತೇವೆ “ಎಂದು ಕರಾಚಿಯ ಗಿಲ್ಗಿಟ್ ಬಲ್ಟಿಸ್ತಾನ್ ಯುವ ಒಕ್ಕೂಟದ ಮುಖಂಡರು ಹೇಳಿದ್ದಾರೆ
ಪಾಕಿಸ್ಥಾನದ ಇತರ ಪಟ್ಟಣಗಳಲ್ಲಿ ವಾಸಿಸುತ್ತಿರುವ ಗಿಲ್ಗಿಟ್ ಬಲ್ಟಿಸ್ತಾನದ ಜನರು ಕೂಡ ಪಾಕ್ ಸರ್ಕಾರದ ಧೋರಣೆ ವಿರುದ್ಧ ಬೀದಿಗಿಳಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.