ಕೊಚ್ಚಿ: ಕೇರಳದ 10 ವರ್ಷದ ಬಾಲಕಿಯೊಬ್ಬಳು ಕೇವಲ ಒಂದು ಗಂಟೆಯಲ್ಲಿ 33 ಬಗೆಯ ಖಾದ್ಯಗಳನ್ನು ತಯಾರಿಸಿ ದಾಖಲೆಯನ್ನು ನಿರ್ಮಾಣ ಮಾಡಿದ್ದಾಳೆ. ಸಾನ್ವಿ ಎಂ ಪ್ರಜಿತ್ ಈ ಸಾಧನೆಯನ್ನು ಮಾಡಿದ ಬಾಲಕಿ. ಕೇರಳದ ಎರ್ನಾಕುಲಂ ಜಿಲ್ಲೆಯವಳು. ವಿಂಗ್ ಕಮಾಂಡರ್ ಪ್ರಜಿತ್ ಅವರ ಮಗಳು.
ಪಾರ್ಟಿಗಳ ಸಂದರ್ಭದಲ್ಲಿ ಅಡುಗೆ ಮಾಡುವುದನ್ನು ನೋಡಿ ಹಲವು ಡಿಶ್ಗಳನ್ನು ಮಾಡುವುದನ್ನು ಆಕೆ ಕಲಿತುಕೊಂಡಿದ್ದಳು. ಆಸಕ್ತಿಯಿಂದ ಅಡುಗೆ ಮಾಡುವ ಕಲೆಯನ್ನು ನೋಡುತ್ತಿದ್ದಳು. ಇದೀಗ ಅದೇ ಆಸಕ್ತಿ ಆಕೆಯನ್ನು ಏಷ್ಯಾಖಂಡದಲ್ಲೇ ದಾಖಲೆ ನಿರ್ಮಾಣ ಮಾಡುವಂತೆ ಮಾಡಿದೆ.
ಲಾಕ್ ಡೌನ್ ಸಮಯದಲ್ಲಿ ಸಾನ್ವಿ ಸಮಯವನ್ನು ಅಡುಗೆ ಮಾಡುವುದರಲ್ಲಿ, ಹೊಸ ಹೊಸ ಅಡುಗೆಗಳನ್ನು ಕಲಿಯುವುದರಲ್ಲಿ ವಿನಿಯೋಗಪಡಿಸಿಕೊಂಡಿದ್ದಾಳೆ. ಆಕೆಯ ಅಜ್ಜಿ ಮತ್ತು ಅಮ್ಮ ಕೂಡ ಅತ್ಯುತ್ತಮ ಅಡುಗೆ ಪಟುಗಳಾಗಿದ್ದು, ಅವರಿಂದಲೂ ಈಕೆ ಸಾಕಷ್ಟು ಕಲಿತಿದ್ದಾಳೆ.
ಸಾನ್ವಿಯ ನೈಪುಣ್ಯತೆ, ಆಸಕ್ತಿ ನೋಡಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ಆಕೆಯ ತಾಯಿ ಮಂಜ್ಮಾ ಅದರಲ್ಲಿ ಮಗಳು ಸರಳವಾಗಿ ರುಚಿಕರವಾಗಿ ಅಡುಗೆ ಮಾಡುವುದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಡುಗೆಯ ಬಗ್ಗೆ ಇರುವ ಆಸಕ್ತಿ ನೋಡಿ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಆಕೆಯನ್ನು ಸಂಪರ್ಕಿಸಿದೆ.
ಕನಿಷ್ಠ 18 ವಿವಿಧ ತಿಂಡಿಗಳನ್ನು ಮಾಡಲು ಬರುವ ಮಕ್ಕಳಿಗೆ ಸ್ಪರ್ಧೆಯನ್ನು ಅದು ಏರ್ಪಡಿಸಿತ್ತು. ಸಾನ್ವಿ ದಾಖಲೆ ನಿರ್ಮಿಸಲು ಪ್ರತಿದಿನ ಹೊಸ ಹೊಸ ಅಡುಗೆ ಮಾಡುವುದನ್ನು ಕಲಿತಳು. ಇದೀಗ ಒಂದು ಗಂಟೆಯಲ್ಲಿ 33 ತಿನಿಸುಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.