ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಅಮೆರಿಕಾದ ಪೆನ್ಸಿಲ್ವೇನಿಯಾದ ಅತಿದೊಡ್ಡ ನಗರವಾದ ಫಿಲಡೆಲ್ಫಿಯಾಕ್ಕೆ 1.8 ಮಿಲಿಯನ್ N95 ಮಾಸ್ಕ್ಗಳನ್ನು ಭಾರತ ಕೊಡುಗೆ ನೀಡಿದೆ, ಇದು ಆರೋಗ್ಯ ಕ್ಷೇತ್ರದಲ್ಲಿ ಬಲವಾದ ಇಂಡೋ-ಯುಎಸ್ ಸಹಭಾಗಿತ್ವಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಫಿಲಡೆಲ್ಫಿಯಾದ ಮೇಯರ್ ಜಿಮ್ ಕೆನ್ನೆ ಅವರು ನಗರದ ಮುಂಚೂಣಿ ಕಾರ್ಮಿಕರು ಬಳಸಬೇಕಾದ ಮುಖಗವಸುಗಳನ್ನು ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾಸ್ಕ್ಗಳನ್ನು ಕಳುಹಿಸಿಕೊಡಲಾಗಿದೆ.
ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೆರವಾಗಲು ಫಿಲಡೆಲ್ಫಿಯಾ ಭಾರತದಿಂದ 1.8 ದಶಲಕ್ಷ N95 ಮುಖವಾಡಗಳನ್ನು ಸ್ವೀಕರಿಸಿದೆ ಎಂದು ಅಮೆರಿಕದ ಭಾರತ ರಾಯಭಾರಿ ತಾರಂಜಿತ್ ಸಿಂಗ್ ಸಂಧು ನಿನ್ನೆ ಟ್ವೀಟ್ ಮಾಡಿದ್ದಾರೆ. ಇದು ಆರೋಗ್ಯ ಕ್ಷೇತ್ರದಲ್ಲಿ ದೃಢವಾದ ಭಾರತ-ಯುಎಸ್ ವಿಶ್ವಾಸಾರ್ಹ ಸಹಭಾಗಿತ್ವದ ಮತ್ತೊಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 5 ರಂದು, ನಗರದ ಮೇಯರ್ ಅವರ ಕೋರಿಕೆಯ ಮೇರೆಗೆ, 1.8 ಮಿಲಿಯನ್ ಎನ್ 95 ಮುಖಗವಸುಗಳನ್ನು ಫಿಲಡೆಲ್ಫಿಯಾಕ್ಕೆ ಮುಂಚೂಣಿ ಕಾರ್ಮಿಕರ ಬಳಕೆಗಾಗಿ ಕಳುಹಿಸಿಕೊಡಲಾಗಿದೆ. ಫಿಲಡೆಲ್ಫಿಯಾ ಅಮೆರಿಕಾದ ಆರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ.
ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಉತ್ಪಾದಿಸುವಲ್ಲಿ ಭಾರತದ ಸಾಮರ್ಥ್ಯದ ಹೆಚ್ಚಾಗಿದ್ದು, ಪಿಪಿಇ ಕಿಟ್ಗಳನ್ನು ಭಾರತ ಈಗ ದೇಶೀಯ ಬಳಕೆಗೆ ಮಾತ್ರವಲ್ಲ, ರಫ್ತು ಕೂಡ ಮಾಡುತ್ತಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋರಿಕೆಯ ಮೇರೆಗೆ ಭಾರತವು ಕೋವಿಡ್-19 ಗೆ ಪರಿಹಾರವೆಂದು ಕಂಡುಬಂದಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮಲೇರಿಯಾ ವಿರೋಧಿ ಔಷಧಿಯನ್ನು ಪೂರೈಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.