ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರುಸ್ತುಂ- II ಡ್ರೋನ್ ಅನ್ನು ಅಕ್ಟೋಬರ್ 9ರಂದು ಯಶಸ್ವಿಯಾಗಿ ಹಾರಾಟ ಪರೀಕ್ಷೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಮೂಲ ಮಾದರಿಯ ಡ್ರೋನ್ ಕರ್ನಾಟಕದ ಚಿತ್ರದುರ್ಗದಲ್ಲಿ 16,000 ಅಡಿಗಳಷ್ಟು ಎತ್ತರದಲ್ಲಿ ಎಂಟು ಗಂಟೆಗಳ ಪರೀಕ್ಷಾರ್ಥ ಹಾರಾಟವನ್ನು ನಡೆಸಿತು. 2020 ರ ಅಂತ್ಯದ ವೇಳೆಗೆ 26,000 ಅಡಿ ಎತ್ತರದಲ್ಲಿ 18 ಗಂಟೆಗಳ ನಿರಂತರ ಹಾರಾಟವನ್ನು ಡ್ರೋನ್ ಸಾಧಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ವಾಯುಪಡೆಗೆ ಶಕ್ತಿ ತುಂಬುವ ರುಸ್ತುಂ-2 ಡ್ರೋನ್ ಚಾಲಕ ರಹಿತ ಯುದ್ಧ ಬಳಕೆಯ ಡ್ರೋನ್ ಆಗಿದೆ. ಚಿತ್ರದುರ್ಗದ ನಾಯಕನಹಟ್ಟಿಯಿಂದ 8 ಕಿ.ಮೀ. ದೂರದಲ್ಲಿರುವ ದೇಶದ ಏಕೈಕ ಮಾನವ ರಹಿತ ವಿಮಾನ (ಯುಎವಿ) ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಟ್ಟು ಯಶಸ್ವಿಯಾಗಿದೆ.
ಶುಕ್ರವಾರ ಡಿಆರ್ಡಿಒ (ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ) ನೆಲೆಯಿಂದ ಹೊರಟ ರುಸ್ತುಂ-2 ಇಲ್ಲಿನ ವೈಮಾನಿಕ ಕೇಂದ್ರದಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ 16 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿತ್ತು. ಬೆಳಗ್ಗೆ 6:30ಕ್ಕೆ ಹೊರಟ ಡ್ರೋನ್ ಮಧ್ಯಾಹ್ನ 2:30ಕ್ಕೆ ನೆಲೆಗೆ ವಾಪಸಾಗಿದೆ. ಎಂಟು ಗಂಟೆಗಳ ಹಾರಾಟದ ಬಳಿಕವೂ ಒಂದು ಗಂಟೆಗೆ ಸಾಲುವಷ್ಟು ಇಂಧನ ಇದರಲ್ಲಿ ಉಳಿದಿತ್ತು ಎನ್ನಲಾಗಿದೆ.
ರುಸ್ತುಂ-2 ಎಲೆಕ್ಟ್ರಾನಿಕ್ ಬುದ್ಧಿವಂತಿಕೆ ಹೊಂದಿದ್ದು, ವಾಯು ನೆಲೆಯಿಂದ ನಿರಂತರ ಸಂಪರ್ಕ ಹೊಂದುತ್ತದೆ ಮತ್ತು ಎಲ್ಲ ರೀತಿಯ ಸಂದೇಶಗಳನ್ನು ನಿರಂತರವಾಗಿ ಕಳಿಸುವ ಕ್ಷಮತೆ ಹೊಂದಿದೆ. ನಾನಾ ರೀತಿಯ ಶಸ್ತ್ರಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಇದಕ್ಕಿದೆ. ಇಸ್ರೇಲ್ ದೇಶದ ಹೀರಾನ್ ಡ್ರೋನ್ ಕಾರ್ಯಕ್ಷಮತೆಯನ್ನು ರುಸ್ತುಂ-2 ಹೊಂದಲಿದೆ. ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾಗಿರುವ ಡ್ರೋನ್ ದೇಶದ ಹೆಮ್ಮೆಯ ಮಾನವ ರಹಿತ ವಿಮಾನವಾಗಿದೆ. ಹೀಗಾಗಿ ಯುದ್ಧ ಭೂಮಿಯಲ್ಲಿ ದೇಶದ ಯಾವುದೇ ಸೈನಿಕರನ್ನು ಬಲಿ ಕೊಡದೆ ಮಾನವ ರಹಿತವಾಗಿ ಡ್ರೋನ್ ಬಳಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಭಾರತೀಯ ವಾಯುಸೇನೆ ಇದೇ ಮಾದರಿಯ ಇಸ್ರೇಲ್ ನಿರ್ಮಿತ ಡ್ರೋನ್ಗಳನ್ನು ಬಳಸುತ್ತಿದೆ. ರುಸ್ತುಂ-2 ಪ್ರಮುಖ ಹಂತ ತಲುಪಿರುವುದಕ್ಕೆ ಇಲ್ಲಿನ ವಾಯುನೆಲೆಯ ಅ ಧಿಕಾರಿಗಳು ಹಾಗೂ ಸಿಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.