ಇಸ್ಲಾಮಾಬಾದ್: ಚೀನಾದ ಪರಮಮಿತ್ರ ಪಾಕಿಸ್ಥಾನ ಟಿಕ್ಟಾಕ್ ಅನ್ನು ನಿಷೇಧಿಸಿ ಅಚ್ಚರಿ ಮೂಡಿಸಿದೆ. ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಕೆಲವು ರಾಷ್ಟ್ರಗಳು ಟಿಕ್ಟಾಕ್ ಅನ್ನು ನಿಷೇಧಿಸಿದ ಬಳಿಕ ಇದೀಗ ಪಾಕಿಸ್ಥಾನ ಕೂಡ ಇದನ್ನು ನಿಷೇಧಕ್ಕೆ ಒಳಪಡಿಸಿದೆ.
ಸರ್ಕಾರದ ನಿಯಮಗಳನ್ನು ಪಾಲಿಸಲು ಟಿಕ್ ಟಾಕ್ ವಿಫಲಗೊಂಡಿದೆ ಎಂದು ಆರೋಪಿಸಿ ಅದನ್ನು ನಿಷೇಧಿಸಲಾಗಿದೆ ಎಂದು ಪಾಕಿಸ್ಥಾನದ ಟೆಲಿಕಾಂ ಇಲಾಖೆ ಹೇಳಿದೆ.
ಟಿಕ್ಟಾಕ್ನಲ್ಲಿ ಅಶ್ಲೀಲ, ಅನೈತಿಕ ಮತ್ತು ಕಾನೂನುಬಾಹಿರ ವಿಷಯಗಳನ್ನು ಹರಿಬಿಡಲಾಗುತ್ತಿದೆ ಎಂಬ ಬಗ್ಗೆ ಕಳೆದ ಜುಲೈ ತಿಂಗಳಲ್ಲಿ ಪಾಕಿಸ್ಥಾನ ಚೀನಾಗೆ ತಿಳಿಸಿತ್ತು. ಇದೀಗ ನಿಷೇಧಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಅಪ್ಲಿಕೇಶನ್ಗೆ ನಿಯಂತ್ರಣ ಹೇರುವುದಾದರೆ ನಿಷೇಧ ಕ್ರಮವನ್ನು ಪರಿಶೀಲಿಸುವುದಾಗಿ ಪಾಕಿಸ್ಥಾನ ಹೇಳಿದೆ.
Pakistan’s Telecommunication Authority blocks Chinese app TikTok “in view of a number of complaints from different segments of the society against immoral/indecent content on the video-sharing platform” https://t.co/3GWaqAbetK pic.twitter.com/DTzfOMd727
— ANI (@ANI) October 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.