ನವದೆಹಲಿ: 2.30 ಲಕ್ಷ ಮನೆಗಳನ್ನು ಒಳಗೊಂಡ ಗ್ರಾಮೀಣ ಪ್ರದೇಶಗಳಿಗೆ ಶೇ 100 ರಷ್ಟು ಟ್ಯಾಪ್ ನೀರಿನ ಸಂಪರ್ಕವನ್ನು ಒದಗಿಸಿದ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಗೋವಾ. ಈ ಬಗ್ಗೆ ಜಲ ಶಕ್ತಿ ಸಚಿವಾಲಯ ಶುಕ್ರವಾರ ಘೋಷಣೆ ಮಾಡಿದೆ.
ಸರ್ಕಾರದ ಜಲ ಜೀವನ್ ಮಿಷನ್ 2024 ರ ವೇಳೆಗೆ ಎಲ್ಲಾ ಗ್ರಾಮೀಣ ಮನೆಗಳಿಗೆ ಟ್ಯಾಪ್ ನೀರು ಒದಗಿಸುವ ಗುರಿ ಹೊಂದಿದೆ.
“2.30 ಲಕ್ಷ ಗ್ರಾಮೀಣ ಕುಟುಂಬಗಳನ್ನು ಒಳಗೊಂಡ ಗ್ರಾಮೀಣ ಪ್ರದೇಶಗಳಲ್ಲಿ 100 ಪ್ರತಿಶತದಷ್ಟು ಕ್ರಿಯಾತ್ಮಕ ಗೃಹ ಟ್ಯಾಪ್ ಸಂಪರ್ಕಗಳನ್ನು (ಎಫ್ಎಚ್ಟಿಸಿ) ಯಶಸ್ವಿಯಾಗಿ ಒದಗಿಸುತ್ತಿರುವುದರಿಂದ ಗೋವಾ ದೇಶದ ಮೊದಲ ‘ಹರ್ ಘರ್ ಜಲ’ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಜಲ ಶಕ್ತಿ ಸಚಿವಾಲಯ ತಿಳಿಸಿದೆ.
ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಗ್ರಾಮೀಣ ಸಮುದಾಯಗಳಿಗೆ ಸುಲಭವಾದ ಜೀವನವನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ಜಲ ಜೀವನ್ ಮಿಷನ್ (ಜೆಜೆಎಂ) ಅನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಪಾರ ಪ್ರಯೋಜನಗಳನ್ನು ಬಳಸಿಕೊಂಡ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯದ ಎಲ್ಲಾ ಗ್ರಾಮೀಣ ಮನೆಗಳಿಗೆ ಈಗ ಟ್ಯಾಪ್ ನೀರು ಪೂರೈಕೆಯಾಗುವಂತೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.