ನವದೆಹಲಿ: 27 ದಿನಗಳಲ್ಲಿ ಎರಡನೇ ದೊಡ್ಡ ಪರ್ವತಾರೋಹಣ ನಡೆಸಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಉತ್ತರಾಖಂಡದ 21,615 ಅಡಿ ಎತ್ತರದ ಗಂಗೋತ್ರಿ II ಶಿಖರವನ್ನು ಏರುವಲ್ಲಿ ಯಶಸ್ಸನ್ನು ಸಾಧಿಸಿದೆ. ಗಂಗೋತ್ರಿ II ತಾಂತ್ರಿಕವಾಗಿ ಅತ್ಯಂತ ಸವಾಲಿನ ಶಿಖರಗಳಲ್ಲಿ ಒಂದಾಗಿದೆ.
ಹಿಮದಿಂದ ಆವೃತವಾದ ಈ ಶಿಖರವು ಉತ್ತರಾಖಂಡದ ಗರ್ವಾಲ್ ಹಿಮಾಲಯದಲ್ಲಿದೆ. ಸೆಕ್ಟರ್ ಹೆಡ್ವಾರ್ಟರ್ ಡೆಹ್ರಾಡೂನ್ನ ಪರ್ವತಾರೋಹಣ ವಿಭಾಗದ ಒಂಬತ್ತು ಸದಸ್ಯರು ಕಳೆದ ತಿಂಗಳು ಸೆಪ್ಟೆಂಬರ್ 26 ರಂದು 6,590 ಮೀಟರ್ ಅಥವಾ 21,615 ಅಡಿ ಎತ್ತರದ ಗಂಗೋತ್ರಿ II ಶಿಖರವನ್ನು ಏರಿದ್ದಾರೆ. ಈ ವರ್ಷದ ಆಗಸ್ಟ್ 31 ರಂದು ಈ ಅರೆಸೈನಿಕ ಸೇನೆಯ ಪರ್ವತಾರೋಹಿಗಳು ಹಿಮಾಚಲ ಪ್ರದೇಶದ ಮೌಂಟ್ ಲಿಯೋ ಪಾರ್ಗಿಲ್ ಶಿಖರವನ್ನು ಯಶಸ್ವಿಯಾಗಿ ಏರಿದ್ದರು.
ಐಟಿಬಿಪಿಯ ಪ್ರಕಾರ, ಅದರ ಒಂಬತ್ತು ಸದಸ್ಯರ ತಂಡವು ಸೆಪ್ಟೆಂಬರ್ 26 ರಂದು ಬೆಳಿಗ್ಗೆ 8.20 ಕ್ಕೆ ಗಂಗೋತ್ರಿ II ಶಿಖರವನ್ನು ಯಶಸ್ವಿಯಾಗಿ ಏರಿದೆ. ಈ ಅತ್ಯಂತ ಸವಾಲಿನ ಪರ್ವತಾರೋಹಣದ ನೇತೃತ್ವವನ್ನು ವಹಿಸಿದವರು ಉಪ ಕಮಾಂಡೆಂಟ್ ದೀಪೇಂದರ್ ಸಿಂಗ್ ಮನ್ ಮತ್ತು ಸಹಾಯಕ ಕಮಾಂಡೆಂಟ್ ಭೀಮ್ ಸಿಂಗ್. ಹೆಡ್ ಕಾನ್ಸ್ಟೆಬಲ್ ರಾಜೇಶ್ ಚಂದ್ರ ರಾಮೋಲಾ, ಕಾನ್ಸ್ಟೆಬಲ್ ಪ್ರದೀಪ್ ಪನ್ವಾರ್, ಸಂತೇಂದರ್ ಕುಂದಿ, ಹರೇಂದರ್ ಸಿಂಗ್, ಅಶೋಕ್ ಸಿಂಗ್ ರಾಣಾ, ಅರುಣ್ ಪ್ರಸಾದ್, ಮತ್ತು ಗೋವಿಂದ್ ಪ್ರಸಾದ್ ಯಶಸ್ವಿಯಾಗಿ ಪರ್ವತಾರೋಹಣ ಪೂರ್ಣಗೊಳಿಸಿದ ತಂಡದ ಸದಸ್ಯರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.