ಲಕ್ನೋ: ನೂರಾರು ಮುಗ್ಧ ಜನರ ರಕ್ತದೋಕುಳಿ ಹರಿಸಿ ಭಾರತೀಯರ ತಾಳ್ಮೆಯನ್ನು ಕೆರಳಿಸಿದ, ಕೊನೆಗೆ ಮಾಡಿದ ಪಾಪ ಕೃತ್ಯಕ್ಕೆ ನೇಣುಗಂಬ ಏರಿದ ಉಗ್ರ ಯಾಕುಬ್ ಮೆಮೋನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವವರ ಸಂಖ್ಯೆಯೇನು ಕಡಿಮೆಯಿಲ್ಲ. ದೇಶದ ರಾಜಕಾರಣಿಗಳು, ಬುದ್ಧಜೀವಿಗಳು, ಪತ್ರಕರ್ತರು ಎನಿಸಿಕೊಂಡಿರುವ ಕೆಲ ಮಹಾಶಯರು ನೇಣುಗಂಬವೇರಿದ ಉಗ್ರನ ಸಮರ್ಥನೆಗೆ ತಾ ಮುಂದು ತಾ ಮುಂದು ಎಂಬಂತೆ ಸಾಲುಗಟ್ಟಿ ನಿಂತಿದ್ದಾರೆ.
ಕಾಂಗ್ರೆಸ್ ಮುಖಂಡ ಶಶಿ ತರೂರ್, ದಿಗ್ವಿಜಯ್ ಸಿಂಗ್ ಅವರು ಈಗಾಗಲೇ ಗಲ್ಲುಶಿಕ್ಷೆಯನ್ನು ಬಹಿರಂಗವಾಗಿ ವಿರೋಧಿಸಿ ಜನಸಾಮಾನ್ಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಆದರೆ ಇವರಿಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಮೊಹಮ್ಮದ್ ಫಾರೂಖ್ ಘೋಸಿ ಮೃತನಾದ ಮೆಮೋನ್ ಪತ್ನಿಯನ್ನು ರಾಜ್ಯಸಭಾ ಸದಸ್ಯೆಯನ್ನಾಗಿಸಬೇಕು ಎಂದು ಆಗ್ರಹಿಸಿದ್ದಾನೆ.
ಈ ಬಗ್ಗೆ ತಮ್ಮ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ಯಾಕೂಬ್ ಪತ್ನಿ ರಹೀನ್ ಮೆಮೋನ್ಗೆ ರಾಜ್ಯಸಭಾ ಸದಸ್ಯತ್ವಕ್ಕೆ ಶಿಫಾರಸ್ಸು ಮಾಡಬೇಕು. ಈ ಮೂಲಕ ಅವರನ್ನು ಅವರಂತೆ ಸಂತ್ರಸ್ಥರಾಗಿರುವ ಮುಸ್ಲಿಂ ಕುಟುಂಬದ ಧ್ವನಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಹೀನ್ ಅವರನ್ನೂ ಬಂಧಿಸಿ ಬಳಿಕ ಸಾಕ್ಷ್ಯಾಧಾರಗಳು ಇಲ್ಲದೆ ಬಿಡುಗಡೆ ಮಾಡಲಾಗಿತ್ತು, ಮುಗ್ಧೆಯಾದರೂ ಅವರು ಜೈಲುಶಿಕ್ಷೆ ಅನುಭವಿಸಬೇಕಾಯಿತು, ಇದು ಅನ್ಯಾಯ ಎಂದು ಫಾರೂಖ್ ವಾದಿಸಿದ್ದಾನೆ. ಅಲ್ಲದೇ ಯಾಕುಬ್ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸುತ್ತೇನೆ. ಆದರೆ ಪ್ರತಿ ಭಾರತೀಯನಿಗೂ ರಾಜ್ಯಸಭಾ ಸದಸ್ಯತ್ವ ಪಡೆಯುವ ಹಕ್ಕಿದೆ ಎಂದು ಹೇಳಿದ್ದಾನೆ.
ಫಾರೂಖ್ನಂತೆ ವಿವೇಚನೆ ಇಲ್ಲದೆ ಯೋಚಿಸುವವರು ನಮ್ಮ ದೇಶದಲ್ಲಿ ಇರುವ ತನಕ ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಯಶಸ್ಸು ದೊರೆಯುವುದು ಸುಲಭದ ಮಾತಲ್ಲ. ಜನರಿಂದ ಆಯ್ಕೆಯಾಗಿ ಜನರ ಸೇವಕರಾಗಿ ಕಾರ್ಯನಿರ್ವಹಿಸಬೇಕಾದ ರಾಜಕಾರಣಿಗಳು ಇಂದು ದೇಶದ್ರೋಹಿಗಳ ಪರವಾಗಿ ವಕಲತ್ತು ವಹಿಸುತ್ತಿದ್ದಾರೆ. ಇದಕ್ಕಿಂತ ಅಪಾಯಕಾರಿಯಾದ ಬೆಳವಣಿಗೆ ಮತ್ತೊಂದಿಲ್ಲ. ಇಂತಹ ರಾಜಕಾರಣಿಗಳಿಗೆ ಜನರೇ ಸರಿಯಾದ ಬುದ್ಧಿ ಕಲಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.