ನವದೆಹಲಿ: 88ನೇ ವಾಯು ಸೇನಾ ದಿನದ ಅಂಗವಾಗಿ ಗುರುವಾರ ಬಾಲಕೋಟ ವೈಮಾನಿಕ ದಾಳಿಯಲ್ಲಿ ಭಾಗಿಯಾದ ಭಾರತೀಯ ವಾಯುಸೇನೆಯ ಮೂರು ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ ‘ಯುದ್ಧ್ ಸೇವಾ ಪದಕʼ ನೀಡಿ ಗೌರವಿಸಲಾಗಿದೆ.
ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್, ಗ್ರೂಪ್ ಕ್ಯಾಪ್ಟನ್ ಹ್ಯಾನ್ಸೆಲ್ ಸಿಕ್ವೆರಾ ಮತ್ತು ಗ್ರೂಪ್ ಕ್ಯಾಪ್ಟನ್ ಹೇಮಂತ್ ಕುಮಾರ್ ವಾದ್ರಾ ಯುದ್ಧ್ ಸೇವಾ ಪದಕವನ್ನು ಪಡೆದ ಅಧಿಕಾರಿಗಳು.
ಯುದ್ಧ್ ಸೇವಾ ಪದಕವು ಯುದ್ಧ, ಸಂಘರ್ಷ ಅಥವಾ ಯುದ್ಧದ ಸಮಯದಲ್ಲಿ ಉನ್ನತ ಕ್ರಮಾಂಕದಲ್ಲಿ ವಿಶಿಷ್ಟ ಸೇವೆಯನ್ನು ನೀಡಿರುವ ಯೋಧರ ಸಾಹಸವನ್ನು ಗುರುತಿಸುತ್ತದೆ.
ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಭಾರತೀಯ ವಾಯುಸೇನೆಯ ಮಹಿಳಾ ಫೈಟರ್ ಕಂಟ್ರೋಲರ್. ಐಎಎಫ್ ನಡೆಸಿದ 2019 ರ ಬಾಲಕೋಟ್ ವಾಯುದಾಳಿಯ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಮಾರ್ಗದರ್ಶನ ನೀಡಿದ ತಂಡದ ಭಾಗವಾಗಿದ್ದವರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಕಳೆದ ವರ್ಷ ಫೆಬ್ರವರಿ 26 ರಂದು ಪಾಕಿಸ್ಥಾನದ ಬಾಲಕೋಟ್ನಲ್ಲಿನ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು.
ವಾಯುಪಡೆಯ ಸಂಸ್ಥಾಪನಾ ದಿನವನ್ನು ಗುರುತಿಸಲು ಪ್ರತಿ ವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.