ಹೈದರಾಬಾದ್: ವಯಸ್ಸು ಕೇವಲ ಒಂದು ಸಂಖ್ಯೆ, ಸಾಧನೆಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾನೆ ಹೈದರಾಬಾದ್ನ 1 ವರ್ಷ ಒಂಬತ್ತು ತಿಂಗಳು ವಯಸ್ಸಿನ ಪುಟಾಣಿ ಅದಿತ್ ವಿಶ್ವನಾಥ್ ಗೌರಿಶೆಟ್ಟಿ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆತ ವಿಶ್ವದಾಖಲೆಯನ್ನು ಮಾಡಿದ್ದಾನೆ. ತೀಕ್ಷ್ಣ ಬುದ್ಧಿಶಕ್ತಿಯ ಕಾರಣದಿಂದ ಈತನ ಹೆಸರಿನಲ್ಲಿ ದಾಖಲೆ ಸೃಷ್ಟಿಯಾಗಿದೆ.
ಅದಿತ್ 5 ದಾಖಲೆಗಳನ್ನು ಮಾಡಿದ್ದಾನೆ. ವರ್ಲ್ಡ್ ಬುಕ್ ಅಫ್ ರೆಕಾರ್ಡ್ಸ್, ಇಂಡಿಯ ಬುಕ್ ಅಫ್ ರೆಕಾರ್ಡ್ಸ್, ತೆಲುಗು ಬುಕ್ ಆಫ್ ರೆಕಾರ್ಡ್ಸ್ ಮತ್ತು ಎರಡು ನ್ಯಾಷನಲ್ ರೆಕಾರ್ಡ್ಸ್ಗಳನ್ನು ಈತ ತನ್ನದಾಗಿಸಿಕೊಂಡಿದ್ದಾನೆ.
ಒಂದು ವರ್ಷ 9 ತಿಂಗಳಿನ ಅದಿತ್ ಎಲ್ಲಾ ಬಣ್ಣಗಳನ್ನು ಗುರುತಿಸುತ್ತಾನೆ, ಪ್ರಾಣಿಗಳ ಹೆಸರು ಹೇಳುತ್ತಾನೆ, ಬಹುತೇಕ ದೇಶಗಳ ಧ್ವಜಗಳನ್ನು ಗುರುತಿಸುತ್ತಾನೆ, ಹಣ್ಣುಗಳು ಮತ್ತು ಆಕಾರಗಳು, ವಿದ್ಯುತ್ ಉಪಕರಣಗಳು ಮುಂತಾದ ಚಿತ್ರಗಳನ್ನು ಗುರುತಿಸಿ ಅದರ ಹೆಸರನ್ನು ಹೇಳುತ್ತಾನೆ. ದೇವರು, ಕಾರುಗಳ ಲೋಗೋ, ಇಂಗ್ಲೀಷ್ ವರ್ಣಮಾಲೆ, ಸಾಕುಪ್ರಾಣಿಗಳು, ಕಾಡು ಪ್ರಾಣಿಗಳು, ವೃತ್ತಿಗಳು, ದೇಹದ ಭಾಗಗಳನ್ನು ಈತ ಚಾಚೂ ತಪ್ಪದಂತೆ ಗುರುತಿಸುತ್ತಾನೆ.
ಮಾತು ಕಲಿಯುವ ಈ ವಯಸ್ಸಿನಲ್ಲಿ ಆತ ಇಷ್ಟೆಲ್ಲ ವಸ್ತುಗಳನ್ನು ಗುರುತಿಸುವುದು ನಿಜಕ್ಕೂ ವಿಶೇಷವೇ ಆಗಿದೆ.
Telangana: One year & 9 months old Aadith Vishwanath Gourishetty of Hyderabad makes it to World Book of Record & four other record books for having a sharp memory. His father says, “He can recognise alphabets, pictorial objects, logos, flags, fruits, animals etc.” (07.10.2020) pic.twitter.com/Lg4ozq9UWd
— ANI (@ANI) October 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.