ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಭಾಗವಾಗುವಂತೆ ಮತ್ತು ಭಾರತವನ್ನು ತಮ್ಮ ಮುಂದಿನ ಹೂಡಿಕೆ ತಾಣವನ್ನಾಗಿ ನೋಡುವಂತೆ ಅಮೆರಿಕದ ಹೂಡಿಕೆದಾರರಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೊಯಲ್ ಅವರು ಆಹ್ವಾನವನ್ನು ನೀಡಿದ್ದಾರೆ.
ಚೇಂಬರ್ ಆಫ್ ಕಾಮರ್ಸ್ ಯುಎಸ್ಎ ಸಮಿತ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಸರಕಾರವು ದೃಢ ನಿಲವು, ಮುಕ್ತತೆ ಮತ್ತು ಬದಲಾವಣೆಗೆ ಬದ್ಧವಾಗಿದೆ ಎಂದಿದ್ದಾರೆ
“ಒಗ್ಗೂಡಿದ ಪ್ರೇರಣೆಯೊಂದಿಗೆ ನಾವು ಒಟ್ಟಾಗಿ ಕಾರ್ಯನಿರ್ವಹಿಸುವ, ಪರಸ್ಪರ ತೊಡಗಿಸಿಕೊಳ್ಳುವ ಮತ್ತು ಅಮೆರಿಕ ಮತ್ತು ಭಾರತದ ಜನರ ಭವಿಷ್ಯಯು ಸಮೃದ್ಧಿಯಿಂದ ಕೂಡಿದೆ ಎಂಬ ಬಗ್ಗೆ ನಮಗೆ ಖಚಿತವಿದೆ” ಎಂದಿದ್ದಾರೆ.
“ವರ್ಷಗಳು ಕಳೆದಂತೆ ಅಮೆರಿಕ ಮತ್ತು ಭಾರತದ ಬಾಂಧವ್ಯ ವೃದ್ಧಿಯಾಗುತ್ತಾ ಹೋಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಅಡಿಯಲ್ಲಿ ಕೈಗೊಂಡ ಬೃಹತ್ ಸುಧಾರಣಾ ಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಲು ಯುಎಸ್ ಮತ್ತು ಭಾರತವು ಅವಕಾಶವನ್ನು ಹೊಂದಿದೆ. ಯುಎಸ್ ಮತ್ತು ಭಾರತದ ನಡುವಿನ ಸಾಮರ್ಥ್ಯವು ಮಿತಿಯಿಲ್ಲದ್ದು” ಎಂದು ಅವರು ಹೇಳಿದ್ದಾರೆ.
“ನಾವು ಒಬ್ಬರನ್ನೊಬ್ಬರು ನಂಬುವ ಪಾಲುದಾರರಾಗಿದ್ದೇವೆ. ಯುಎಸ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವು 2017 ರಲ್ಲಿ 126 ಬಿಲಿಯನ್ ಡಾಲರ್ಗಳಿಂದ 2019 ರಲ್ಲಿ 145 ಬಿಲಿಯನ್ ಡಾಲರ್ಗಳಿಗೆ ಏರಿತು. ಮುಂದಿನ 5 ವರ್ಷಗಳಲ್ಲಿ ನಾವು 500 ಬಿಲಿಯನ್ ಡಾಲರ್ಗಳನ್ನು ನಿಗದಿಪಡಿಸಿರುವ ಗುರಿಯನ್ನು ಹೊಂದಿದ್ದೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.