ನವದೆಹಲಿ: ಭಾರತದ ಹತ್ತಿಗೆ ಬ್ರಾಂಡ್ ಮತ್ತು ಲೋಗೋವನ್ನು ನಿನ್ನೆ ಅನಾವರಣಗೊಳಿಸಲಾಗಿದೆ. ಅಕ್ಟೋಬರ್ 7 ವಿಶ್ವ ಹತ್ತಿ ದಿನ, ಇದರ ಪ್ರಯುಕ್ತ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ಹತ್ತಿಗಾಗಿ ಮೊದಲ ಬ್ರಾಂಡ್ ಮತ್ತು ಲೋಗೋವನ್ನು ಅನಾವರಣಗೊಳಿಸಿದ್ದಾರೆ.
ಇನ್ನು ಮುಂದೆ ಭಾರತದ ಪ್ರೀಮಿಯಂ ಕಾಟನ್ ಅನ್ನು ವಿಶ್ವ ಹತ್ತಿ ವ್ಯಾಪಾರದಲ್ಲಿ ‘ಕಸ್ತೂರಿ ಕಾಟನ್’ ಎಂದು ಕರೆಯಲಾಗುತ್ತದೆ. ಕಸ್ತೂರಿ ಕಾಟನ್ ಬ್ರಾಂಡ್ ಬಿಳುಪು, ಹೊಳಪು, ಮೃದುತ್ವ, ಶುದ್ಧತೆ, ಹೊಳಪು, ಅನನ್ಯತೆ ಮತ್ತು ಭಾರತೀಯತೆಯನ್ನು ಪ್ರತಿನಿಧಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ, ಇಂದು ಭಾರತೀಯ ಕಾಟನ್ ಬ್ರಾಂಡ್ ಮತ್ತು ಲೋಗೊವನ್ನು ಪಡೆದ ಬಹುನಿರೀಕ್ಷಿತ ಕ್ಷಣವಾಗಿದೆ. 2 ನೇ ವಿಶ್ವ ಹತ್ತಿ ದಿನವನ್ನು ಇಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತಿರುವುದರಿಂದ ಈ ಸನ್ನಿವೇಶ ಹೆಚ್ಚು ಮಹತ್ವದ್ದಾಗಿದೆ ಎಂದಿದ್ದಾರೆ.
“ಹತ್ತಿ ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 6.00 ಮಿಲಿಯನ್ ಹತ್ತಿ ಬೆಳಗಾರರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಭಾರತವು ಹತ್ತಿ ಉತ್ಪಾದನೆಯಲ್ಲಿ 2 ನೇ ಅತಿದೊಡ್ಡ ದೇಶವಾಗಿದೆ ಮತ್ತು ವಿಶ್ವದ ಅತಿದೊಡ್ಡ ಹತ್ತಿಯ ಗ್ರಾಹಕನಾಗಿದೆ. ಭಾರತವು ಪ್ರತಿವರ್ಷ ಸುಮಾರು 6.00 ಮಿಲಿಯನ್ ಟನ್ ಹತ್ತಿಯನ್ನು ಉತ್ಪಾದಿಸುತ್ತದೆ, ಇದು ವಿಶ್ವದ ಹತ್ತಿಯ 23% ಆಗಿದೆ. ವಿಶ್ವದ ಒಟ್ಟು ಸಾವಯವ ಹತ್ತಿ ಉತ್ಪಾದನೆಯಲ್ಲಿ ಭಾರತವು ಸುಮಾರು 51% ರಷ್ಟು ಉತ್ಪಾದಿಸುತ್ತದೆ, ಇದು ಸುಸ್ಥಿರತೆಯತ್ತ ಭಾರತದ ಪ್ರಯತ್ನವನ್ನು ತೋರಿಸುತ್ತದೆ” ಎಂದು ಸ್ಮೃತಿ ಹೇಳಿದ್ದಾರೆ.
Hon’ble Minister of Textiles @smritiirani Ji launched the 1st ever Brand & Logo for Indian Cotton to be known as ‘Kasturi Cotton’ on occasion of 2nd World Cotton Day, 2020. The Brand will represent Whiteness, Brightness, Softness, Purity, Luster, Uniqueness and Indianness. pic.twitter.com/EDOJIY5UHU
— Ministry of Textiles (@TexMinIndia) October 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.