ನವದೆಹಲಿ: ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ ಯೋಜನೆ (ಪಿಎಲ್ಐ) ಅಡಿಯಲ್ಲಿ 16 ಫೋನ್ ತಯಾರಕರ ಪ್ರಸ್ತಾಪಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಅನುಮೋದಿಸಿದೆ. ಅರ್ಹ ಕಂಪೆನಿಗಳಿಗೆ ಭಾರತದಲ್ಲಿ ಉತ್ಪಾದನೆಯನ್ನು ನಡೆಸಲು ಐದು ವರ್ಷಗಳ ಅವಧಿಗೆ 4% ರಿಂದ 6% ರಷ್ಟು ಪ್ರೋತ್ಸಾಹ ಧನಗಳನ್ನು ನೀಡಲು ಪಿಎಲ್ಐ ಯೋಜನೆಯನ್ನು ಏಪ್ರಿಲ್ 1 ರಂದು ಘೋಷಿಸಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಯು ಒಟ್ಟು 10.5 ಲಕ್ಷ ಕೋಟಿ ರೂ.ಗಳ ಉತ್ಪಾದನೆಗೆ ಕಾರಣವಾಗಲಿದೆ ಎಂದು ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಲ್ಲಿ, ಮೊಬೈಲ್ ಫೋನ್ (ಸರಕು ಮೌಲ್ಯ 15,000 ಮತ್ತು ಅದಕ್ಕಿಂತ ಹೆಚ್ಚಿನ) ವಿಭಾಗದ ಅಡಿಯಲ್ಲಿ ಅನುಮೋದನೆ ಪಡೆದ ಕಂಪನಿಗಳು 9,00,000 ಕೋಟಿ ರೂಪಾಯಿಯ ಉತ್ಪಾದನೆಯನ್ನು ಪ್ರಸ್ತಾಪಿಸಿದೆ. ಮೊಬೈಲ್ ಫೋನ್ (ದೇಶೀಯ ಕಂಪನಿಗಳು) ವಿಭಾಗದ ಅಡಿಯಲ್ಲಿ ಅನುಮೋದಿತ ಕಂಪನಿಗಳು ಸುಮಾರು 1,25,000 ಕೋಟಿ ರೂಪಾಯಿ ಮತ್ತು ನಿರ್ದಿಷ್ಟ ಎಲೆಕ್ಟ್ರಾನಿಕ್ ಘಟಕಗಳ ವಿಭಾಗದ ಅಡಿಯಲ್ಲಿರುವ ಕಂಪನಿಗಳು 15,000 ಕೋಟಿ ರೂಪಾಯಿ ಉತ್ಪಾದನೆಯನ್ನು ಪ್ರಸ್ತಾಪಿಸಿವೆ.
ಮೊಬೈಲ್ ಫೋನ್ (ಇನ್ವಾಯ್ಸ್ ಮೌಲ್ಯ ರೂ. 15,000 ಮತ್ತು ಅದಕ್ಕಿಂತ ಹೆಚ್ಚಿನದು) ಅಡಿಯಲ್ಲಿ ಅನುಮೋದನೆ ಪಡೆದ ಕಂಪನಿಗಳು ಸ್ಯಾಮ್ಸಂಗ್, ಫಾಕ್ಸ್ಕಾನ್ ಹೊನ್ ಹೈ, ರೈಸಿಂಗ್ ಸ್ಟಾರ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್. ಇವುಗಳಲ್ಲಿ, ಫಾಕ್ಸ್ಕಾನ್ ಹೊನ್ ಹೈ, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಆ್ಯಪಲ್ ಐಫೋನ್ಗಳ ಗುತ್ತಿಗೆ ತಯಾರಕರು. ಆ್ಯಪಲ್ (37%) ಮತ್ತು ಸ್ಯಾಮ್ಸಂಗ್ (22%) ಒಟ್ಟಾಗಿ ಮೊಬೈಲ್ ಫೋನ್ಗಳ ಜಾಗತಿಕ ಮಾರಾಟದ ಸುಮಾರು 60% ರಷ್ಟಿದೆ ಮತ್ತು ಈ ಯೋಜನೆಯು ದೇಶದಲ್ಲಿ ಅವುಗಳ ಉತ್ಪಾದನಾ ಮೂಲವನ್ನು ಅನೇಕ ಪಟ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.