ನವದೆಹಲಿ: ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಅಡಿಯಲ್ಲಿ ವನ್ಯಜೀವಿ ಸಂಸ್ಥೆ ಮತ್ತು ಅರಣ್ಯ ಇಲಾಖೆ ಸೋಮವಾರ ಗಂಗಾ ನದಿ ಡಾಲ್ಫಿನ್ ದಿನದಂದು ಮೈ ಗಂಗಾ ಮೈ ಡಾಲ್ಫಿನ್ ಅಭಿಯಾನವನ್ನು ಪ್ರಾರಂಭಿಸಿದೆ.
ಗಂಗಾ ನದಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಡಾಲ್ಫಿನ್ ಆಧಾರಿತ ಪರಿಸರ ಪ್ರವಾಸೋದ್ಯಮ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದನ್ನು ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಆರು ತಾಣಗಳಲ್ಲಿ ಪ್ರಾರಂಭಿಸಲಾಗಿದೆ.
“ಇದು ಡಬ್ಲ್ಯುಐಐ, ಎನ್ಎಂಸಿಜಿ ಮತ್ತು ರಾಜ್ಯ ಅರಣ್ಯ ಇಲಾಖೆಗಳ ಜಂಟಿ ಕಾರ್ಯವಾಗಿದೆ, ಗಂಗಾ ನದಿಯ ಉದ್ದಕ್ಕೂ ಪರಿಸರ ಪ್ರವಾಸೋದ್ಯಮಕ್ಕಾಗಿ ಡಾಲ್ಫಿನ್ ಸಂರಕ್ಷಣೆಯನ್ನು ಮಾಡುವುದು, ಆ ಮೂಲಕ ಜೀವನೋಪಾಯವನ್ನು ಸಂಪರ್ಕಿಸುವ ಸುಸ್ಥಿರ ಪ್ರವಾಸೋದ್ಯಮ ಸ್ಥಾಪಿಸುವುದು ಇದರ ಉದ್ದೇಶ” ಎಂದು ಜಲ ಶಕ್ತಿ ಸಚಿವಾಲಯ ಹೇಳಿದೆ.
ಈ ಸಂದರ್ಭದಲ್ಲಿ ವೀಡಿಯೊ ಸಂದೇಶದ ಮೂಲಕ ಮಾತನಾಡಿದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಇತ್ತೀಚಿನ ವರ್ಷಗಳಲ್ಲಿ ಗಂಗಾ ಡಾಲ್ಫಿನ್ಗಳ ಜನಸಂಖ್ಯೆಯು ಹೆಚ್ಚಾಗಿದೆ.. ಗಂಗಾ ನದಿಯ ಪುನರುಜ್ಜೀವನ ಮತ್ತು ಜೀವವೈವಿಧ್ಯತೆಯ ಮಹತ್ವವನ್ನುಸಾರಲು ಡಾಲ್ಫಿನ್ ಸಂರಕ್ಷಣಾ ಅಭಿಯಾನಕ್ಕೆ ಸೇರುವಂತೆ ಜನರಿಗೆ ಮನವಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.