ನವದೆಹಲಿ: ಅಕ್ಟೋಬರ್ 8ರ ವಾಯುಸೇನಾ ದಿನದಂದು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿವೆ ರಫೇಲ್, Su-30MKI, ಅಪಾಚೆ, ತೇಜಸ್ ಮುಂತಾದ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು. ಉತ್ತರಪ್ರದೇಶದ ಘಾಜಿಯಾಬಾದಿನ ಹಿಂಡನ್ ವಾಯುನೆಲೆಯಲ್ಲಿ ಈ ಬಾರಿಯ ವಾಯುಸೇನಾ ವಾರ್ಷಿಕೋತ್ಸವ ಜರುಗಲಿದೆ.
19 ಯುದ್ಧ ವಿಮಾನಗಳು, 7 ಸಾರಿಗೆ ವಿಮಾನಗಳು, 19 ಹೆಲಿಕಾಪ್ಟರ್ ಸೇರಿದಂತೆ 56 ಏರ್ಕ್ರಾಫ್ಟ್ಗಳು ವಾಯುಸೇನೆಯ ಪರೇಡ್ನಲ್ಲಿ ಭಾಗಿಯಾಗಲಿವೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯ ಆಕರ್ಷಣೆ ಎಂದರೆ ಅದು ರಫೇಲ್ ಯುದ್ಧ ವಿಮಾನ. ಮೊದಲ ಬಾರಿಗೆ ಅದು ವಾಯುಸೇನಾ ಪರೇಡ್ನಲ್ಲಿ ಭಾಗಿಯಾಗುತ್ತಿದೆ. ‘ವಿಜಯ್ ‘ ರಚನೆ ಮೂಲಕ ಮನಸೋರೆಗೊಳ್ಳಲು ಅದು ಈಗಾಗಲೇ ಸಿದ್ಧತೆ ನಡೆಸಿದೆ.
ಈ ವರ್ಷದ ಐಎಎಫ್ ದಿನದ ಪರೇಡ್ನಲ್ಲಿ ರಫೇಲ್ ಯುದ್ಧ ವಿಮಾನವು ಜಾಗ್ವಾರ್ಗಳ ಜೊತೆಗೆ ‘ವಿಜಯ್’ ರಚನೆಯಲ್ಲಿ ಮತ್ತು ನಂತರ ಸುಖೋಯ್ -30 ಎಂಕೆಐ ಮತ್ತು ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ತೇಜಸ್ ಯುದ್ಧ ವಿಮಾನಗಳೊಂದಿಗೆ ‘ಟ್ರಾನ್ಸ್ಫಾರ್ಮರ್’ ರಚನೆಯಲ್ಲಿ ಹಾರಾಟ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.