ಸ್ಟಾಕ್ ಹೋಂ: ಈ ಬಾರಿಯ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪುರಸ್ಕಾರ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮೆರೆದ ಮೂವರು ಗಣ್ಯರಿಗೆ ಈ ಪುರಸ್ಕಾರವನ್ನು ಜಂಟಿಯಾಗಿ ನೀಡುವುದಾಗಿ ‘ದಿ ನೊಬೆಲ್ ಪ್ರೈಜ್’ ತಿಳಿಸಿದೆ.
ಹೆಪಟೈಟಿಸ್ ಸಿ ವೈರಸ್ ಪತ್ತೆಗಾಗಿ ಸಂಶೋಧಕರಾದ ಹಾರ್ವೆ ಜೆ. ಆಲ್ಟರ್, ಮೈಕಲ್ ಹೊವನ್,ಚಾರ್ಲ್ಸ್ ಎಂ. ರೈಸ್ ಅವರಿಗೆ ಈ ಪುರಸ್ಕಾರವನ್ನು ಜಂಟಿಯಾಗಿ ನೀಡವುದಾಗಿ ಮಾಹಿತಿ ನೀಡಿದೆ.
ಈ ವಿಜ್ಞಾನಿಗಳ ಸಂಶೋಧನೆಯಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಹೆಪಾಟೈಟಿಸ್ ಸಿ ಶಮನ ಸಾಧ್ಯ ಎಂಬುದು ತಿಳಿದು ಬಂದಿದೆ. ಹೆಪಟೈಟಿಸ್ ಎ ಮತ್ತು ಬಿ ಸಂಶೋಧನೆಗಳ ನಂತರವೂ ದೀರ್ಘ ಕಾಲದ ವರೆಗೆ ಕಾಡುವ ಯಕೃತ್ ಸಮಸ್ಯೆಗೆ ಪೂರ್ಣ ಪರಿಹಾರ ದೊರೆತಿಲ್ಲ. ಹೆಪಾಟೈಟಿಸ್ ಸಿ ವೈರಸ್ ಕುರಿತು ಪತ್ತೆಯಾದ ನಂತರದಲ್ಲಿ ಅದಕ್ಕೆ ಪೂರಕ ಪರೀಕ್ಷೆ, ಅಗತ್ಯ ಔಷಧಗಳ ನೆರವಿನಿಂದ ಲಕ್ಷಾಂತರ ಜನರ ಜೀವ ಉಳಿದಿದೆ ಎಂದು ‘ದಿ ನೊಬೆಲ್ ಪ್ರೈಜ್’ ಟ್ವೀಟ್ ಮಾಡಿದೆ.
BREAKING NEWS:
The 2020 #NobelPrize in Physiology or Medicine has been awarded jointly to Harvey J. Alter, Michael Houghton and Charles M. Rice “for the discovery of Hepatitis C virus.” pic.twitter.com/MDHPmbiFmS— The Nobel Prize (@NobelPrize) October 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.