ನವದೆಹಲಿ: ಭಾರತದ ರಕ್ಷಣಾ ವಲಯದ ಬಲಭೀಮ ಎಂದೇ ಕರೆಯಲ್ಪಡುವ ರಫೇಲ್ ಯುದ್ಧವಿಮಾನಗಳು ಈಗಾಗಲೇ ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿವೆ. ಪ್ರಸ್ತುತ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ನಿಯೋಜನೆಗೊಂಡಿರುವ ಈ ಯುದ್ಧವಿಮಾನಗಳು ಅಕ್ಟೋಬರ್ 8 ರಂದು ವಾಯುಸೇನಾ ದಿನದಂದು ಘಾಜಿಯಾಬಾದ್ಗೆ ಆಗಮಿಸಿ ಪರೇಡ್ನಲ್ಲಿ ಭಾಗಿಯಾಗಲಿದೆ.
ಈ ಬಗ್ಗೆ ಭಾರತೀಯ ವಾಯುಸೇನೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ನೀಡಿದೆ.
“ವಾಯುಸೇನೆ ದಿನದಂದು ರಫೆಲ್ ಘಾಜಿಯಾಬಾದ್ ಹಿಂಡನ್ ವಾಯುನೆಲೆಯಲ್ಲಿ ವಾಯುಸೇನೆಯ ಪರೇಡ್ನಲ್ಲಿ ಭಾಗಿಯಾಗಲಿದೆ” ಎಂದಿದೆ.
ಭಾರತೀಯ ವಾಯುಸೇನೆಯನ್ನು 1932 ರ ಅಕ್ಟೋಬರ್ 8 ರಂದು ಸ್ಥಾಪನೆ ಮಾಡಲಾಯಿತು. ಈ ಬಾರಿ ಅದು 88ನೇ ಸ್ಥಾಪನ ದಿನವನ್ನು ಆಚರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್ ಹಿಂಡನ್ ವಾಯುನೆಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.
#AFDay2020: Rafale – The Rafale is a 4.5 generation, twin-engine omnirole, air supremacy, interdiction, aerial reconnaissance, ground support, in-depth strike, anti-ship and nuclear deterrence fighter aircraft, equipped with a wide range of weapons.#KnowTheIAF#IndianAirForce pic.twitter.com/Zv6VXc17q9
— Indian Air Force (@IAF_MCC) October 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.