ಹೈದರಾಬಾದ್: ಒಂದು ಕಡೆ ವಿಶ್ವ ಇಂದು ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮ ದಿನವನ್ನು ಆಚರಣೆ ಮಾಡುತ್ತಿದೆ. ಮತ್ತೊಂದು ಕಡೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ‘ಕಸ್ತೂರಿಬಾ ಸರ್ಕಾರಿ ಕಾಲೇಜು’ ಹೆಸರನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ.
ಮಹಾತ್ಮ ಗಾಂಧೀಜಿ ಪತ್ನಿ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದ ಕಸ್ತೂರಿಬಾ ಅವರ ಹೆಸರಿನ ಈ ಕಾಲೇಜಿಗೆ ಮರು ನಾಮಕರಣ ಮಾಡಲು ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ.
ಈ ಕಾಲೇಜಿಗೆ ವೈಎಸ್ಆರ್ಸಿಪಿ ಶಾಸಕ ಶ್ರೀನಿವಾಸ್ ಗ್ರಾಂತಿ ಅವರ ತಂದೆ ‘ಗ್ರಾಂತಿ ವೆಂಕಟೇಶ್ವರ ರಾವ್’ ಹೆಸರನ್ನು ಇಡುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಆದರೆ ಜನರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಭೀಮವರಂನಲ್ಲಿರುವ ಈ ಕಾಲೇಜನ್ನು ಸಮಾಜ ಸೇವಕಿ ದಿವಂಗತ ಚಿಂತಲಪತಿ ವರಪ್ರಸಾದ್ ಮೂರ್ತಿ ರಾಜು ಅವರು ಸ್ಥಾಪಿಸಿದ್ದಾರೆ. ಆಂಧ್ರಪ್ರದೇಶ ಸರ್ಕಾರ ಕಾಲೇಜು ನಡೆಸುತ್ತಿದ್ದರೂ, ಅದರ ಹೆಸರು ಕಸ್ತೂರಿ ಬಾ ಎಂದೇ ಇದೆ. ಆದರೆ ಇದೀಗ ಜಗನ್ಮೋಹನ್ ಸರ್ಕಾರ ಕಾಲೇಜಿಗೆ ರಾಜಕೀಯ ವ್ಯಕ್ತಿಯ ಹೆಸರನ್ನು ಮರುನಾಮಕರಣ ಮಾಡಲು ಮುಂದಾಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ನಿರ್ಧಾರವನ್ನು ಗಾಂಧಿ ಮಾರ್ಗದ ಮೂಲಕವೇ ವಿರೋಧಿಸಲು ಮುಂದಾಗಿದ್ದಾರೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ಥಳಿಯರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.