ನವದೆಹಲಿ: ಭಾರತ-ಜಪಾನ್ ಕಡಲ ದ್ವಿಪಕ್ಷೀಯ ವ್ಯಾಯಾಮದ (JIMEX-ndia-Japan Maritime bilateral exercise) ನಾಲ್ಕನೇ ಆವೃತ್ತಿ ಉತ್ತರ ಅರೇಬಿಯನ್ ಸಮುದ್ರದಲ್ಲಿ ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ವ್ಯಾಯಾಮವನ್ನು ಭಾರತೀಯ ನೌಕಾಪಡೆ ಮತ್ತು ಜಪಾನಿನ ಮ್ಯಾರಿಟೈಮ್ ಸ್ವರಕ್ಷಣಾ ಪಡೆ (ಜೆಎಂಎಸ್ಡಿಎಫ್) ನಡುವೆ ದ್ವೈವಾರ್ಷಿಕವಾಗಿ ನಡೆಸಲಾಗುತ್ತದೆ.
ಕಡಲ ಭದ್ರತಾ ಸಹಕಾರಕ್ಕೆ ವಿಶೇಷ ಗಮನಹರಿಸಿ 2012 ರ ಜನವರಿಯಲ್ಲಿ ‘JIMEX’ ಸರಣಿಯ ವ್ಯಾಯಾಮ ಪ್ರಾರಂಭವಾಯಿತು. JIMEXನ ಕೊನೆಯ ಆವೃತ್ತಿಯನ್ನು 2018 ರ ಅಕ್ಟೋಬರ್ನಲ್ಲಿ ವಿಶಾಖಪಟ್ಟಣಂ ಕರಾವಳಿಯಲ್ಲಿ ನಡೆಸಲಾಯಿತು. ಕೋವಿಡ್-19 ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು JIMEX 20 ಅನ್ನು ಮೂರು ದಿನಗಳ ಕಾಲ ನಡೆಸಲಾಗುತ್ತಿದೆ. ಇದನ್ನು ‘non-contact at-sea-only format’ನಲ್ಲಿ ಅಂದರೆ ಸಂಪರ್ಕವಿಲ್ಲದೆ ಕೇವಲ ಸಮುದ್ರ ವಿಧಾನದಲ್ಲಿ ನಡೆಸಲಾಗುತ್ತಿದೆ.
ಭಾರತ ಮತ್ತು ಜಪಾನ್ ನಡುವಿನ ನೌಕಾ ಸಹಕಾರದ ವ್ಯಾಪ್ತಿ ಮತ್ತು ಸಂಕೀರ್ಣತೆ ವರ್ಷಗಳಿಂದ ವೃದ್ಧಿಯಾಗುತ್ತಾ ಬಂದಿದೆ. ‘JIMEX -20 ಅವಧಿಯಲ್ಲಿ ಯೋಜಿಸಲಾದ ಸುಧಾರಿತ ಮಟ್ಟದ ಕಾರ್ಯಾಚರಣೆಗಳು ಮತ್ತು ವ್ಯಾಯಾಮಗಳು ಇಂಡೋ-ಜಪಾನೀಸ್ ರಕ್ಷಣಾ ಸಂಬಂಧಗಳಲ್ಲಿನಿರಂತರ ಏರಿಕೆಯನ್ನು ಸೂಚಿಸುತ್ತವೆ ಮತ್ತು ಅಂತರರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ಹೆಚ್ಚು ಸುರಕ್ಷಿತ, ಮುಕ್ತ ಮತ್ತು ಅಂತರ್ಗತ ಜಾಗತಿಕ ಹಿತಾಸಕ್ತಿಗಳಿಗಾಗಿ ನಿಕಟವಾಗಿ ಕೆಲಸ ಮಾಡಲು ಎರಡೂ ಸರ್ಕಾರಗಳು ಮಾಡಿದ ಪ್ರಯತ್ನಗಳನ್ನು ಸೂಚಿಸುತ್ತವೆ.
JIMEX 20 ಉಭಯ ನೌಕಾಪಡೆಗಳ ನಡುವಿನ ಸಹಕಾರ ಮತ್ತು ಪರಸ್ಪರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಉಭಯ ದೇಶಗಳ ನಡುವಿನ ದೀರ್ಘಕಾಲದ ಸ್ನೇಹ ಸಂಬಂಧವನ್ನು ಬಲಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.