ನವದೆಹಲಿ: ಕೆಲವು ತಿಂಗಳುಗಳ ಹಿಂದೆ ನಡೆದಿದ್ದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಮಹತ್ವದ ಆಘಾತಕಾರಿ ಅಂಶವೊಂದು ಬಯಲಾಗಿದೆ.
ಈ ಹಿಂಸಾಚಾರವನ್ನು ನಡೆಸಲು ಕಾಂಗ್ರೆಸ್ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್, ಖಾಲಿದ್ ಸೈಫಿ, ಎಎಪಿ ಪಕ್ಷದಿಂದ ಅಮಾನತುಗೊಂಡ ಕೌನ್ಸಿಲರ್ ತಾಹಿರ್ ಹುಸೇನ್ ಸುಮಾರು 1.61 ಕೋಟಿ ರೂ. ಗಳನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಮ್ಮ ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಇವರಷ್ಟೇ ಅಲ್ಲದೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಫಿಯಾ ಉರ್ ರೆಹಮಾನ್ ಮತ್ತು ವಿದ್ಯಾರ್ಥಿ ಮೀರನ್ ಹೈದರ್ ಹೆಸರನ್ನೂ ಪೊಲೀಸರು ಉಲ್ಲೇಖಿಸಿದ್ದಾರೆ. ಈ ಪಟ್ಟಿಯಲ್ಲಿ ಸುಮಾರು 15 ಜನರ ಹೆಸರುಗಳನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೇಲೆ ಹೇಳಲಾದ ಆರೋಪಿಗಳ ಖಾತೆಗೆ 2019 ರ ಡಿಸೆಂಬರ್ 1 ರಿಂದ ತೊಡಗಿದಂತೆ 26 ಫೆಬ್ರವರಿ 2020 ವರೆಗೆ 1,61,33,703 ರೂ. ಜಮೆಯಾಗಿದೆ ಎಂದು ಈ ಆರೋಪ ಪಟ್ಟಿಯಿಂದ ತಿಳಿದು ಬಂದಿದೆ. ಇದರಲ್ಲಿ 1,48,01,186 ರೂ. ಗಳನ್ನು ಸಂಚಿಗೆ ಬಳಕೆ ಮಾಡಿರುವುದಾಗಿಯೂ ಪೊಲೀಸರು ಬಹಿರಂಗಪಡಿಸಿದ್ದಾರೆ. ಡಿ. 10 ರಂದು ಆರೋಪಿ ಇಶ್ರತ್ ಖಾತೆಯಿಂದ 4 ಲಕ್ಷ ರೂ. ಮಹಾರಾಷ್ಟ್ರದ ಮಹಾದೇವ್ ವಿಜಯ್ ಕಾಸ್ಟೆ ಎಂಬಾತನ ಖಾತೆಗೆ ಜಮೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ವಿಜಯ್, ತಾನು ಮಹಾರಾಷ್ಟ್ರದ ಸಮೀರ್ ಅಬ್ದುಲ್ ಸಾಯಿ ಎಂಬಾತನ ಕಾರು ಚಾಲಕನಾಗಿದ್ದು ಈ ಹಣವನ್ನು ಇಶ್ರತ್ ಖಾತೆಗೆ ಸಮೀರ್ ಅವರೇ ಹಣ ವರ್ಗಾಯಿಸಿರುವುದಾಗಿಯೂ ತಿಳಿಸಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.