ನವದೆಹಲಿ: ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು ಸಪ್ಟೆಂಬರ್ 17 ಅನ್ನು ಟ್ರೆಂಡ್ ಮಾಡುತ್ತಿದ್ದಾರೆ. ಈ ರೀತಿ ಟ್ರೆಂಡ್ ಮಾಡುತ್ತಿರುವವರನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ಉದ್ಯೋಗವನ್ನು ಕಸಿದುಕೊಂಡವರು ಇಂದು ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಟ್ವೀಟ್ ಮಾಡಿರುವ ಕಂಗಣಾ, “ನನ್ನ ಕರ್ಮ ಸ್ಥಾನವನ್ನು ಸ್ಮಶಾನ ಮಾಡಿದರು, ಈ ಮೂಲಕ ಅನೇಕರ ಉದ್ಯೋಗವನ್ನು ಕಸಿದುಕೊಂಡಿದ್ದಾರೆ , ಒಂದು ಫಿಲ್ಮ್ ಯುನಿಟ್ ಕನಿಷ್ಠ 100 ಮಂದಿಗೆ ಉದ್ಯೋಗವನ್ನು ನೀಡುತ್ತದೆ. ಒಂದು ಫಿಲ್ಮ್ ರಿಲೀಸ್ ಆಗುವುದರಿಂದ ಥಿಯೇಟರ್ನಿಂದ ಹಿಡಿದು ಪಾಪ್ಕಾರ್ನ್ ಮಾರಾಟ ಮಾಡುವವರವರೆಗೆ ಮನೆ ನಡೆಯುತ್ತದೆ. ಇಂದು ನಮ್ಮೆಲ್ಲರಿಂದ ಉದ್ಯೋಗವನ್ನು ಕಸಿದುಕೊಂಡು ಅವರು ರಾಷ್ಟ್ರೀಯ ನಿರುದ್ಯೋಗ ದಿನವನ್ನು ಆಚರಿಸುತ್ತಿದ್ದಾರೆ” ಎಂದಿದ್ದಾರೆ.
ಸಿನಿಮಾ ಮಾಫಿಯಾದ ವಿರುದ್ಧ ದಿಟ್ಟವಾಗಿ ಧ್ವನಿಯೆತ್ತುವ ಕಂಗಣಾ ರನಾವತ್ ಅವರು ಇಂದು ರಾಜಕೀಯ ಸೇರಿದಂತೆ ಸಿನಿಮಾ ಮಂದಿಯ ಟಾರ್ಗೆಟ್ ಆಗುತ್ತಿದ್ದಾರೆ. ಆದರೆ ಯಾವುದಕ್ಕೂ ಎದೆಗುಂದದ ಅವರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
मेरे कर्म स्थान को शमशान बना दिया, नजाने कितने लोगों का रोज़गार छीन लिया, एक फ़िल्म यूनिट कई सौ लोगों को रोज़गार देतीं है, एक फ़िल्म रिलीज़ होकर थीयटर से लेकर पॉप्कॉर्न बेचने वाले का घर चलती है, हम सब से रोज़गार छीन के वो लोग आज #NationalUnemploymentDay17Sept मना रहे हैं 🙂 pic.twitter.com/UaEvI4nSE8
— Kangana Ranaut (@KanganaTeam) September 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.