ನವದೆಹಲಿ: ಹತ್ತು ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡ ಮಹಿಳೆಯೊಬ್ಬಳು ತನ್ನ ಮತ್ತು ತನ್ನ ಮಗನ ಜೀವನೋಪಾಯಕ್ಕಾಗಿ ಜೊಮ್ಯಾಟೋದಲ್ಲಿ ಡೆಲಿವರಿ ಲೇಡಿ ಆಗಿ ಕಾರ್ಯ ನಿರ್ವಹಿಸಿ, ಇದೀಗ ಡೈಮಂಡ್ ಸ್ಟಾರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತಮ್ಮ ಕಾರ್ಯದಕ್ಷತೆಯ ಮೂಲಕವೇ ಸಾಧನೆ ಮಾಡಿ, ಇತರರಿಗೂ ಮಾದರಿಯಾಗಿರುವ ಇವರ ಸಾಧನೆಯಾದರೂ ಏನು? ಎಂಬುದಕ್ಕೆ ಇಲ್ಲಿದೆ ಉತ್ತರ.
ಅವರ ಹೆಸರು ಉಮಾ. ಹತ್ತು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡವರು. ಆದರೆ ಅಳುತ್ತಾ ಕೂತರೆ ಬದುಕು ಮುಂದುವರೆಯಲಾರದು ಎಂಬುದನ್ನು ಮನಗಂಡು, ತಮ್ಮ ಹಾಗೂ ತಮ್ಮ ಮಗನ ಜೀವನ ನಿರ್ವಹಣೆಗಾಗಿ ಜೊಮ್ಯಾಟೋದಲ್ಲಿ ಡೆಲಿವರಿ ಕೆಲಸಕ್ಕೆ ಸೇರುತ್ತಾರೆ. ಇವರ ಇಷ್ಟು ವರ್ಷಗಳ ಕೆಲಸದ ಅವಧಿಯಲ್ಲಿ ಇವರು ಒಪ್ಪಿಕೊಂಡ ಯಾವುದೇ ಡೆಲಿವರಿ ಆರ್ಡರ್ಗಳು ಕ್ಯಾನ್ಸಲ್ ಆಗಿದ್ದೇ ಇಲ್ಲ. ಅಲ್ಲದೆ ಸಮಯ ತಪ್ಪಿಸಿ ಆರ್ಡರ್ಗಳು ತಡವಾಗಿ ಗ್ರಾಹಕರನ್ನು ಸೇರಿದ ಘಟನೆಗಳೂ ನಡೆದಿಲ್ಲ. ಇವರ ಈ ಸಾಧನೆಗೆ ಇದೀಗ ಡೈಮಂಡ್ ಸ್ಟಾರ್ ಪ್ರಶಸ್ತಿ ಉಮಾ ಅವರ ಮುಡಿಗೇರಿದೆ.
ಈ ಸಂಬಂಧ ಗ್ರಾಹಕರಾದ ಸುಕೃತಿ ಚಕ್ರವರ್ತಿ ಎಂಬವರು ಸೆ. 11 ರಂದು ಟ್ವೀಟ್ ಒಂದನ್ನು ಮಾಡಿದ್ದು, ಅದರಲ್ಲಿ ಉಮಾ ಅವರ ಕಾರ್ಯ ದಕ್ಷತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಿನಕ್ಕೆ ಸುಮಾರು 250-300 ಕಿಮೀ ಗಳನ್ನು ತಮ್ಮ ಬೈಕ್ ಮೂಲಕ ಕ್ರಮಿಸಿ ಜೊಮ್ಯಾಟೋ ಆರ್ಡರ್ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಇವರ ಕಾರ್ಯದಕ್ಷತೆಯ ಕಾರಣದಿಂದ ಸಂಸ್ಥೆ ಡೈಮಂಡ್ ಸ್ಟಾರ್ ಪ್ರಶಸ್ತಿ ನೀಡಿದೆ. ಉಮಾ ಅವರ ಸೇವೆ ಗ್ರಾಹಕರ ಮನದಲ್ಲಿ ಸ್ಥಾನ ಪಡೆದಿದೆ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಇದು ನಿಜವಾದ ಮಹಿಳಾ ಸಬಲೀಕರಣ. ಆಕೆ ಗೌರವಕ್ಕೆ ಅರ್ಹರು ಮತ್ತು ಆದರ್ಶಪ್ರಾಯರು ಎಂದು ಟ್ವೀಟಿಸಿದ್ದಾರೆ.
ಈ ಟ್ವೀಟ್ಗೆ 18 ಸಾವಿರದಷ್ಟು ಲೈಕ್ಗಳು ಮತ್ತು 3800 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ. ಇವರ ಈ ಸಾಧನೆಯನ್ನು ಶ್ಲಾಘಿಸಿ ಜೊಮ್ಯಾಟೋ ಸಹ ಟ್ವೀಟ್ ಮಾಡಿದೆ. ಜೊತೆಗೆ ನೆಟ್ಟಿಗರಿಂದಲೂ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ಉಮಾ ಎಂದು ನಿಸ್ಸಂಶಯವಾಗಿ ಹೇಳಬಹುದು.
Honoured & Proud to share a real-life hero!
Ms Uma has been awarded a Diamond star for excellence,because she has no cancellations, no delayed deliveries. She travels 250 -300 Kms a day on her bike.
Lost her husband 10yrs bck but takes care of her son proudly all by herself! pic.twitter.com/qmWdksHTzZ
— Sukriti Chakravarty (@CS_Sukriti) September 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.