ಮಂಗಳೂರು: ಏಕ ಕಾಲಕ್ಕೆ ಎರಡೂ ಕೈಗಳನ್ನು ಬಳಸಿ ಬರೆಯುವುದು ಸಾಧ್ಯವೇ?. ನೀವೆಂದಾದರೂ ಇಂತಹ ಒಂದು ಸಾಧನೆ ಮಾಡೋಣ ಎಂದು ಪ್ರಯತ್ನ ನಡೆಸಿದ್ದೀರಾ. ಅಲ್ಲ ಅದು ಹೇಗೆ ಸಾಧ್ಯ. ಒಂದೇ ಕೈಯಲ್ಲಿ ಬರೆಯುವಾಗಲೇ ತಪ್ಪುಗಳಾಗುತ್ತದೆ. ಇನ್ನು ಏಕ ಕಾಲಕ್ಕೆ ಎರಡೂ ಕೈಗಳನ್ನು ಬಳಸಿ ಬರೆಯುವುದು ಹೇಗೆ ಸಾಧ್ಯ. ಇದು ಸುಳ್ಳು ಎಂದೆಲ್ಲಾ ಯೋಚಿಸುತ್ತಿದ್ದೀರಾ. ಆದರೆ ನಿಮ್ಮ ಆ ಯೋಚನೆಯನ್ನು ತಲೆಕೆಳಗಾಗಿಸಿ ವಿಶೇಷ ಸಾಧನೆ ಮೆರೆದ ಪೋರಿಯೊಬ್ಬಳು ಮಂಗಳೂರಿನಲ್ಲಿ ಇದ್ದಾಳೆ.
ಇವಳ ಹೆಸರು ಆದಿ ಸ್ವರೂಪ. ತನ್ನ ಎರಡೂ ಕೈಗಳನ್ನು ಬಳಸಿ ಏಕಕಾಲಕ್ಕೆ ಒಂದು ನಿಮಿಷದಲ್ಲಿ 45 ಇಂಗ್ಲಿಷ್ ಶಬ್ಧಗಳನ್ನು ಬರೆಯುವ ಮೂಲಕ ವಿಶೇಷ ದಾಖಲೆ ಮೆರೆದಿದ್ದಾಳೆ. ಇವಳ ಈ ಸಾಧನೆಗೆ ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆಯು ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಘೋಷಿಸಿದೆ.
ಇವರು ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಮತ್ತು ಸುಮಾಡ್ಕರ್ ಎಂಬವರ ಪುತ್ರಿ. ಶಾಲೆಗೆ ಹೋಗುತ್ತಿಲ್ಲ. ಆದರೆ ಈಕೆ ಯಾವ ಮಕ್ಕಳಿಗೂ ಕಮ್ಮಿ ಇಲ್ಲ. ಸದ್ಯ ಹತ್ತನೇ ತರಗತಿಯ ಸ್ವಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಕೆ ಬಹುಮುಖ ಪ್ರತಿಭೆ. ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಎರಡು ವರ್ಷಗಳ ಹಿಂದೆ ಎರಡೂ ಕೈಗಳಿಂದ ಬರೆಯುವುದನ್ನು ಅಭ್ಯಸಿಸಿದ್ದು, ಇದೀಗ ಇವರು ತಮ್ಮ ಸಾಧನೆಯ ಅನಾವರಣ ಮಾಡಿದ್ದಾರೆ.
ಯುನಿಡೈರೆಕ್ಷನಲ್, ಒಪೋಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್ಚೇಂಜ್, ಡ್ಯಾನ್ಸಿಂಗ್ ಮತ್ತು ಬ್ಲೈಂಡ್ ಫೋಲ್ಡಿಂಗ್ ಎನ್ನುವ ಹತ್ತು ಶೈಲಿಗಳಲ್ಲಿ ಬೋರ್ಡ್ನಲ್ಲಿ ಬರೆಯುವ ಮೂಲಕ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ಹತ್ತು ಬಗೆಯ ವಿಶ್ವ ದಾಖಲೆಗೂ ಇವರು ಸಿದ್ಧತೆ ನಡೆಸುತ್ತಿದ್ದಾರೆ.
ಸೆ. 15 ರಂದು ಆದಿ ಸ್ವರೂಪರ 16ನೇ ಹುಟ್ಟುಹಬ್ಬವಾಗಿದ್ದು, ಈ ದಾಖಲೆ ಆಕೆಗೆ ಉಡುಗೊರೆಯಾಗಿದೆ ಎಂದು ಗೋಪಾಡ್ಕರ್ ತಿಳಿಸಿದ್ದಾರೆ. ಈಕೆ ಈ ಸಾಧನೆಯ ಜೊತೆಗೆ ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್ ಬಾಕ್ಸ್, ಅದ್ಭುತ ನೆನಪು ಶಕ್ತಿಯ ತ್ರಯೋದಶ ಅವಧಾನ, ರೂಬಿಕ್ ಕ್ಯೂಬ್ ಇತ್ಯಾದಿ ವಿಷಯಗಳ ಅಧ್ಯಯನದಲ್ಲೂ ನಿರತಳಾಗಿದ್ದಾಳೆ ಎಂದು ಹೆತ್ತವರು ಮಾಹಿತಿ ನೀಡಿದ್ದಾರೆ.
Mangaluru: 16-year-old Aadi Swaroopa can write with both hands at the same time. "I can write in English, Kannada at same time. I also do mimicry, singing," she says.
Her mother says practice made her proficient & she can write 45 words in a minute with both hands. #Karnataka pic.twitter.com/ImU6HWer7Z
— ANI (@ANI) September 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.