News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈ ಬಾರಿಯ ಸಂಸತ್‌ ಅಧಿವೇಶನವನ್ನು ಭಿನ್ನವಾಗಿಸಿದ 10 ಅಂಶಗಳು

ಕೋವಿಡ್ -19 ನಮ್ಮ ಜೀವನದ ಎಲ್ಲಾ ಅಂಶಗಳನ್ನು ಬದಲಾಯಿಸಿಬಿಟ್ಟಿದೆ,  ಸಂಸತ್ತಿನ ಮಾನ್ಸೂನ್ ಅಧಿವೇಶನ ಕೂಡ ಇದಕ್ಕೆ ಹೊರತಾಗಿಲ್ಲ. 18 ದಿನಗಳ ಮಾನ್ಸೂನ್ ಅಧಿವೇಶನವು ಇಂದು ಪ್ರಾರಂಭವಾಗಿದೆ, ಇದು ಅನೇಕ ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಸಂಸತ್ ಅಧಿವೇಶನವನ್ನು ಸಾಂಕ್ರಾಮಿಕದ ರೋಗದ ನಡುವೆ ನಡೆಸಲಾಗುತ್ತಿದೆ. ದೇಶದಲ್ಲಿ ಕೊರೋನಾ ಚೇತರಿಕೆ ಪ್ರಮಾಣವು 78% ಅನ್ನು ಮುಟ್ಟಿದ್ದರೂ ಭಾರತದ ಒಟ್ಟು ಕೋವಿಡ್ ಸಂಖ್ಯೆ 48 ಲಕ್ಷ ದಾಟಿದೆ. ನಡವಳಿಕೆ ನಿಯಮಗಳಲ್ಲಿನ ಬದಲಾವಣೆಗಳೊಂದಿಗೆ ಸಂಸದರು ತಮ್ಮನ್ನು ತಾವು  ನಿಯಂತ್ರಿಸಿಕೊಂಡು ಸಂಸತ್ತಿಗೆ ಅಗಮಿಸುತ್ತಿದ್ದಾರೆ. ಫೇಸ್ ಮಾಸ್ಕ್, ಟಚ್-ಫ್ರೀ ಸ್ಕ್ರೀನ್‌ಗಳು ಸಂಸತ್ತಿನಲ್ಲಿ ಈ ಬಾರಿ ಸಾಮಾನ್ಯ ದೃಶ್ಯವಾಗಿದೆ. ಈ ಮಾನ್ಸೂನ್ ಅಧಿವೇಶನವು ಹಿಂದೆ ನಡೆದಿರುವ ಅಧಿವೇಶನಕ್ಕಿಂತ ಭಿನ್ನವಾಗಿದೆ ಎಂಬುದಕ್ಕೆ  10 ವಿಷಯಗಳು ಇಲ್ಲಿವೆ.

1. ಪರೀಕ್ಷೆ:  ಮಾನ್ಸೂನ್ ಅಧಿವೇಶನಕ್ಕೆ ಹಾಜರಾಗುವ ಮೊದಲು ಸಂಸದರು ಕೋವಿಡ್-19 ಪರೀಕ್ಷೆಗೆ (ಆರ್‌ಟಿ-ಪಿಸಿಆರ್) ಒಳಗಾಗಬೇಕಾಗಿದೆ. ಸದಸ್ಯರು ತಮ್ಮ ಪರೀಕ್ಷಾ ವರದಿಯನ್ನು ಗೊತ್ತುಪಡಿಸಿದ ಇ-ಮೇಲ್ ಮೂಲಕ ಕಳುಹಿಸಬೇಕಾಗಿದೆ. ಅಂತೆಯೇ, ಪಾರ್ಲಿಮೆಂಟ್ ಹೌಸ್ ಕಾಂಪ್ಲೆಕ್ಸ್‌ನಲ್ಲಿ ನಿಯೋಜಿಸಲಾದ ಪಾರ್ಲಿಮೆಂಟ್ ಸೆಕ್ರೆಟರಿಯಟ್ಸ್ ಮತ್ತು ಇತರ ಏಜೆನ್ಸಿಗಳ ನೌಕರರಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇವರು ತಮ್ಮ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಸದಸ್ಯರ ಹತ್ತಿರದಲ್ಲಿಯೇ ಇರುವ ಕಾರಣ ಪರೀಕ್ಷೆಯನ್ನು ಕಡ್ಡಾಯ ಮಾಡಲಾಗಿದೆ.

2. ಅಪಾಯವನ್ನು ತಗ್ಗಿಸುವುದು ಮತ್ತು ಸದಸ್ಯರ ಆರೋಗ್ಯದ ರಕ್ಷಣೆ ಅತ್ಯಂತ ಮುಖ್ಯವಾಗಿದೆ. ಸದಸ್ಯರು ಮತ್ತು ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗೃಹ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗಳು, ಅಧ್ಯಕ್ಷರು / ಡಿಆರ್‌ಡಿಒ, ಡಿಜಿ / ಐಸಿಎಂಆರ್ ಅವರೊಂದಿಗೆ ಹಲವಾರು ಸಭೆಗಳನ್ನು ನಡೆಸಲಾಗಿದೆ.

3. ಸಾಮಾಜಿಕ ಅಂತರದ ಮಾನದಂಡಗಳು: ರಾಜ್ಯಸಭಾ ಕೊಠಡಿ, ಗ್ಯಾಲರಿಗಳು ಮತ್ತು ಲೋಕಸಭಾ ಕೊಠಡಿಯನ್ನು ಸದಸ್ಯರ ಆಸನ ವ್ಯವಸ್ಥೆಗೆ ಬಳಸಲಾಗುತ್ತದೆ . ಅವರಲ್ಲಿ 57 ಮಂದಿಗೆ ಕೊಠಡಿಯಲ್ಲಿ ಮತ್ತು 51 ಮಂದಿಗೆ ರಾಜ್ಯಸಭೆಯ ಗ್ಯಾಲರಿಗಳಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಉಳಿದ 136 ಜನರನ್ನು ಲೋಕಸಭೆಯ ಕೊಠಡಿಯಲ್ಲಿ ಕೂರಿಸಲಾಗಿದೆ. ಒಟ್ಟಾರೆಯಾಗಿ ರಾಜ್ಯಸಭೆಯಲ್ಲಿ  244 ಸದಸ್ಯರಿದ್ದು, ಒಂದು ಸ್ಥಾನ ಖಾಲಿ ಇದೆ.

4. ವಿಶೇಷ ವ್ಯವಸ್ಥೆ: ಚರ್ಚೆಯಲ್ಲಿ ಭಾಗವಹಿಸಲು ಪ್ರತಿ ಆಸನಕ್ಕೆ ಮೈಕ್ರೊಫೋನ್ ಮತ್ತು ಸೌಂಡ್ ಕನ್ಸೋಲ್ ಒದಗಿಸಲಾಗಿದೆ. ಸದಸ್ಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕುಳಿತುಕೊಂಡು ಮಾತನಾಡಲು ಸದಸ್ಯರಿಗೆ ಈಗ ಅವಕಾಶವಿದೆ.

5. ತೀವ್ರವಾದ ಸಿದ್ಧತೆಗಳು: ಕೋಣೆಯಲ್ಲಿ ನಾಲ್ಕು ದೊಡ್ಡ ಡಿಸ್‌ಪ್ಲೆ ಸ್ಕ್ರೀನ್‌ಗಳನ್ನು ಹಾಕಲಾಗಿದ್ದು, ಇದು ಸದಸ್ಯರು ಮಾತನಾಡುವುದನ್ನು ತೋರಿಸುತ್ತದೆ ಮತ್ತು ರಾಜ್ಯಸಭಾ ಟಿವಿಯಲ್ಲಿ ಕಲಾಪದ ತಡೆರಹಿತ ನೇರ ಪ್ರಸಾರವನ್ನು ಮಾಡಲಾಗುತ್ತದೆ. ಇದಲ್ಲದೆ, ನಾಲ್ಕು ಗ್ಯಾಲರಿಗಳಲ್ಲಿ ಆರು ಸಣ್ಣ ಪ್ರದರ್ಶನ ಪರದೆಗಳು ಮತ್ತು ಆಡಿಯೊ ಕನ್ಸೋಲ್‌ಗಳನ್ನು ಸ್ಥಾಪಿಸಲಾಗಿದೆ.

6. ಡಿಜಿಟಲ್ ಇಂಡಿಯಾಗೆ ಉತ್ತೇಜನ: ವ್ಯವಹಾರಗಳ ಪಟ್ಟಿ, ಬುಲೆಟಿನ್‌ಗಳು, ಮಸೂದೆಗಳು / ಮತ್ತು ಸುಗ್ರೀವಾಜ್ಞೆಗಳು ಸೇರಿದಂತೆ ಸಂಸದೀಯ ಪತ್ರಿಗಳನ್ನು ಸದಸ್ಯರಿಗೆ ಎಲೆಕ್ಟ್ರಾನಿಕ್ ಕಾರ್ಯವಿಧಾನದ ಮೂಲಕ ಮಾತ್ರ ನೀಡಲಾಗುತ್ತದೆ. ಸದಸ್ಯರು ತಮ್ಮ ಪೋರ್ಟಲ್ ಖಾತೆಗಳನ್ನು ಪ್ರವೇಶಿಸಿ ಇದನ್ನು ನೋಡಬಹುದು. ಅದರಂತೆ, ಇವುಗಳ ಹಾರ್ಡ್ ಪ್ರತಿಗಳ ಪ್ರಸರಣವನ್ನು ನಿಲ್ಲಿಸಲಾಗುತ್ತದೆ.

7. ರಕ್ಷಣಾ ಕಾರ್ಯದಲ್ಲಿ ಡಿಆರ್‌ಡಿಒ: ಡಿಆರ್‌ಡಿಒ ಎಲ್ಲಾ ಸಂಸದರಿಗೆ ಮಲ್ಟಿ ಯುಟಿಲಿಟಿ ಕೋವಿಡ್ ಕಿಟ್‌ಗಳನ್ನು ಒದಗಿಸಿದೆ. ಪ್ರತಿ ಕಿಟ್‌ನಲ್ಲಿ ಬಿಸಾಡಬಹುದಾದ ಮೂರು-ಪ್ಲೈ ಮುಖಗವಸುಗಳು (40),  ಎನ್ -95 ಮುಖಗವಸುಗಳು (20), ಹ್ಯಾಂಡ್‌ ಸ್ಯಾನಿಟೈಝರ್ (ತಲಾ 50 ಮಿಲಿ)  ಬಾಟಲಿಗಳು , ಪಾಲಿಪ್ರೊಪೆಲೀನ್ (5), ಕೈಗವಸುಗಳು (40), ಬಾಗಿಲುಗಳನ್ನು ಮುಟ್ಟದೆ ತೆರೆಯಲು ಮತ್ತು ಮುಚ್ಚಲು ಟಚ್ ಫ್ರೀ ಹುಕ್ , ರೋಗನಿರೋಧಕ ಶಕ್ತಿ  ಹೆಚ್ಚಿಸಲು  ಬಕ್ ಥಾರ್ನ್ ಟೀ ಬ್ಯಾಗ್‌ಗಳನ್ನು ಹೊಂದಿದೆ.

8. ತಲಾ 4 ಗಂಟೆಗಳ ಕಲಾಪ, ರಜಾದಿನಗಳಿಲ್ಲ: ಎರಡೂ ಸದನಗಳಲ್ಲಿ ಪ್ರತಿದಿನ ನಾಲ್ಕು ಗಂಟೆಗಳ ಕಲಾಪ ಇದೆ ಮತ್ತು ವಾರಾಂತ್ಯದಲ್ಲಿ ಅಥವಾ ಇತರ ರಜಾದಿನಗಳಲ್ಲಿ ರಜೆ ಇಲ್ಲದೆ ಕಲಾಪ ಮುಂದುವರೆಯಲಿದೆ.

9. ಖಾಸಗಿ ಸದಸ್ಯರ ವ್ಯವಹಾರವಿಲ್ಲ ಮತ್ತು ಪ್ರಶ್ನೋತ್ತರ ಅವಧಿ ಇಲ್ಲ: ಮೊದಲ ಬಾರಿಗೆ ಖಾಸಗಿ ಸದಸ್ಯರ ವ್ಯವಹಾರ ಅಥವಾ ಪ್ರಶ್ನೋತ್ತರ ಅವಧಿ ಸಂಸತ್ತಿನ ಅಧಿವೇಶನದಲ್ಲಿ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೂ ಸರ್ಕಾರವು ನಿರ್ಣಾಯಕ ಪ್ರಶ್ನೆಗಳಿಂದ ನುಣುಚಿಕೊಳ್ಳುವುದಿಲ್ಲ ಎಂದು ಪ್ರಧಾನಿ ಎಲ್ಲಾ ಪಕ್ಷಗಳಿಗೆ ಭರವಸೆ ನೀಡಿದ್ದಾರೆ.

10. ರಾಜ್ಯಸಭೆಯ 252 ನೇ ಅಧಿವೇಶನಕ್ಕೆ ಯಾವುದೇ ಸೆಷನಲ್ / ತಾತ್ಕಾಲಿಕ ರಾಜ್ಯಸಭೆ ಪ್ರೆಸ್ ಗ್ಯಾಲರಿ ಪಾಸ್ ನೀಡಲಾಗುವುದಿಲ್ಲ. ಮಾನ್ಯತೆ ಪಡೆದ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ವಾರ್ಷಿಕ ಪಾಸ್ ಹೊಂದಿರುವವರು ಮತ್ತು ಎಲ್ & ಡಿ ವರ್ಗದ ಪಾಸ್ ಹೊಂದಿರುವವರಿಗೆ ಮಾತ್ರ ರಾಜ್ಯಸಭೆ ಮತ್ತು ಲೋಕಸಭೆಯ ಪ್ರೆಸ್ ಗ್ಯಾಲರಿಗಳಲ್ಲಿ ಕಲಾಪ ವೀಕ್ಷಿಸಲು ಅವಕಾಶವಿರುತ್ತದೆ.

 

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top