ಮುಂಬಯಿ: ಲಾಕ್ಡೌನ್ ಮತ್ತು ಅನ್ಲಾಕ್ ಸಂದರ್ಭದಲ್ಲಿ ಕೇಂದ್ರ ರೈಲ್ವೆಯು 61,978 ಟನ್ ಪಾರ್ಸೆಲ್ಗಳನ್ನು ಹಂತಹಂತವಾಗಿ ಸಾಗಿಸಿದೆ ಎಂದು ಭಾರತೀಯ ರೈಲ್ವೆಯ ಮೂಲಗಳು ಮಾಹಿತಿ ನೀಡಿವೆ.
ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 23 ರಿಂದ ಎಲ್ಲಾ ಪ್ರಯಾಣಿಕ ರೈಲುಗಳ ಸೇವೆಗಳನ್ನು ನಿಲ್ಲಿಸಲಾಯಿತು. ಆದರೂ, ವಲಸಿಗರ ಪ್ರಯಾಣಕ್ಕಾಗಿ ವಿಶೇಷ ರೈಲುಗಳನ್ನು ಓಡಿಸಲಾಯಿತು. ಮಾತ್ರವಲ್ಲದೇ, ದೇಶಾದ್ಯಂತ ಅಗತ್ಯ ವಸ್ತುಗಳ ಸರಬರಾಜು ಸರಪಳಿಯನ್ನು ನಿರ್ವಹಿಸಲು ಸರಕು ಮತ್ತು ಪಾರ್ಸೆಲ್ ರೈಲುಗಳು ನಿರಂತರವಾಗಿ ಓಡಾಡುತ್ತಲೇ ಇವೆ.
ರೈಲ್ವೆಯು ಪಾರ್ಸೆಲ್ಗಳ ನಿರ್ವಹಣೆಗಾಗಿ ಎಕ್ಸ್ಪ್ರೆಸ್ ರೈಲುಗಳನ್ನು ಪರಿಚಯಿಸಿತು, ಇದು ಅಗತ್ಯ ಸರಕುಗಳ ತ್ವರಿತ ಸಾಗಣೆಗೆ ಮತ್ತು ಸರಬರಾಜು ಸರಪಳಿಯನ್ನು ನಿರ್ವಹಿಸಲು ಸಮಯೋಚಿತವಾಗಿ ಚಲಿಸುತ್ತಿವೆ.
ಸೆಪ್ಟೆಂಬರ್ 10 ರವರೆಗೆ ಬೇಗ ಹಾಳಾಗುವ ವಸ್ತುಗಳು, ಔಷಧ ಉತ್ಪನ್ನಗಳು, ಔಷಧಿಗಳು, ಇ-ಕಾಮರ್ಸ್ ಉತ್ಪನ್ನಗಳು ಮತ್ತು ಇತರ ಲಘು ಪಾರ್ಸೆಲ್ಗಳು ಸೇರಿದಂತೆ 38,618 ಟನ್ ಅಗತ್ಯ ಸರಕುಗಳನ್ನು 465 ಪಾರ್ಸೆಲ್ ರೈಲುಗಳ ಮೂಲಕ ದೇಶವ್ಯಾಪಿ ಸಾಗಿಸಲಾಗಿದೆ.
ಅಲ್ಲದೇ, ಜೂನ್ 1 ರಿಂದ ಕೆಲವು ವಿಶೇಷ ರೈಲುಗಳನ್ನು ಪುನರಾರಂಭಿಸಿದ ನಂತರ, ಕೇಂದ್ರ ರೈಲ್ವೆ ಈ ವಿಶೇಷ ರೈಲುಗಳಲ್ಲಿ 19,290 ಟನ್ಗಳಷ್ಟು ಪಾರ್ಸೆಲ್ ಕಳುಹಿಸಿದೆ.
ಪಾರ್ಸೆಲ್ ಎಕ್ಸ್ಪ್ರೆಸ್ ರೈಲುಗಳನ್ನು ಡಿಸೆಂಬರ್ 31ರವರೆಗೂ ಓಡಿಸಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.