ಮಂಗಳೂರು : Ragging ಎನ್ನುವುದು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ನೀಡುವ ಕಿರುಕುಳವಾಗಿದೆ. ಹೊಸತಾಗಿ ಕಾಲೇಜಿಗೆ ಸೇರಿದವರಿಗೆ ಮೋಜಿಗಾಗಿ ಕೃತ್ಯ ಮಾಡುವುದು ಮಾರಕವಾಗಿದೆ. ಜೊತೆಗೆ ಅದು ಕಾನೂನು ರೀತಿಯ ಅಪರಾಧ ಕೂಡ. ಇದು ಇಂದು ನಾವು ಭಾರತದೆಲ್ಲೆಡೆ ಸಾಮಾನ್ಯವಾಗಿ ಕೇಳುತ್ತಿರುವ ಸುದ್ಧಿ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು ವಕೀಲರ ಸಂಘ ಮತ್ತು ವಿಕಾಸ್ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ Ragging ತಡೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಉದ್ಘಾಟಕರಾಗಿ ಶ್ರೀ ಬೈಲೂರು ಶಂಕರರಾಮ ಸನ್ಮಾನ್ಯ ಪ್ರಾಂಶುಪಾಲ ನ್ಯಾಯಾಧೀಶ, ಫ್ಯಾಮಿಲಿ ಕೋರ್ಟ್ ಮಂಗಳೂರು, ಇವರು ಮಾತನಾಡಿ ಅಬ್ದುಲ್ ಕಲಾಂರವರು ಎಲ್ಲರಿಂದ ನಿರೀಕ್ಷಿಸಿದಂತೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳೊಡನೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಪ್ರೀತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬಹುದು. ಮತ್ತು ಆ ಮೂಲಕ Raggingನ್ನು ತಡೆಯಬಹುದು ಅಲ್ಲಿ ನಿಜವಾದ ಪ್ರೀತಿ ಸೃಷ್ಠಿಯಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಬಿ.ಹಿರಿಯ ನಾಗರಿಕ ನ್ಯಾಯಾಧೀಶ ಮತ್ತು ಕಾರ್ಯದರ್ಶಿ ಜಿಲ್ಲಾ ಸೇವಾ ಅಧಿಕಾರಿ ದಕ್ಷಿಣ ಕನ್ನಡ ಇವರು ಆಗಮಿಸಿದ್ದರು.
ಶ್ರೀ ತಿಲಕಚಂದ್ರ ಸಹಾಯಕ- ಪೋಲೀಸ್ ಆಯುಕ್ತ ಮಂಗಳೂರು ನಗರ, ಹಾಗೂ ಶ್ರೀ ಕೃಷ್ಣ. ಜೆ ಪಾಲೆಮಾರ್ -ಅಧ್ಯಕ್ಷರು ವಿಕಾಸ್ ವಿದ್ಯಾ ಸಂಸ್ಥೆ ಇವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಎ. ಉದಯಾನಂದ ಹಿರಿಯ ವಕೀಲರು ಮಂಗಳೂರು ವಕೀಲರ ಸಂಘ ಇವರು ಮಾತನಾಡಿ ನಾನಾ ರೀತಿಯ Ragging, ಅದರ ಬಹುರೂಪದ ಕುರಿತು ಮಾತನಾಡಿದರು. Ragging ಅನುಭವಿಸಿದ ಮಕ್ಕಳಿಗೆ ತಮಗಾದ ಅನುಭವವನ್ನು ಧೈರ್ಯವಾಗಿ ಹೇಳಿಕೊಳ್ಳುವಂತೆ ಕೇಳಿಕೊಂಡರು. ಅಗತ್ಯ ಬಿದ್ದಲ್ಲಿ ಯಾವುದೇ ಅಧಿಕಾರಿ ಕೂಡ ಅವರ ಸಹಾಯಕ್ಕೆ ಬರಲು ಸಿದ್ಧ ಎಂದರು.
ಮಾನಸಿಕವಾಗಿ ಕುಗ್ಗಿದವರು ಇಂತಹ ಕೃತ್ಯಕ್ಕೆ ಮುಂದಾಗುತ್ತಾರೆ. ರಾಗಿಂಗ್ ಸಂಬಂಧಪಟ್ಟಂತೆ ಕಾನೂನಿನಡಿಯಲ್ಲಿ ಇರುವ ಹಲವಾರು ಪರಿಚ್ಚೇದಗಳ ಬಗ್ಗೆ ತಿಳಿಸಿದರು. ಮಕ್ಕಳ ಕಾನೂನು ಮತ್ತು ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ತಮ್ಮ ಹಕ್ಕುಗಳಿಗೋಸ್ಕರ ಇತರರೊಂದಿಗೆ ಚರ್ಚಿಸಬೇಕು ಎಂದರು.
ವಿಕಾಸ್ ಕಾಲೇಜಿನ ಸಲಹೆಗಾರರಾದ ಶ್ರೀಯುತ ಅನಂತ್ ಪ್ರಭು ಇವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು ವಕೀಲರ ಸಂಘ ಇವರು ತಮ್ಮ ಸಮಯವನ್ನು ಇಲ್ಲಿ ಹೊಂದಿಸಿದ್ದಕ್ಕಾಗಿ ಧನ್ಯವಾದವನ್ನು ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.