ನವದೆಹಲಿ: 168 ರಾಷ್ಟ್ರಗಳೊಂದಿಗೆ ಭಾರತ ಕೂಡ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಕೋವಿಡ್-19 ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ಒಂದು ದೊಡ್ಡ ಜಾಗತಿಕ ಸವಾಲುಗಳಿಗೆ ಪ್ರತಿಕ್ರಿಯಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಪುನರುಚ್ಚರಿಸುವ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ನಾಯಕತ್ವದ ಪಾತ್ರವನ್ನು ಅಂಗೀಕರಿಸುವ ನಿರ್ಣಯ ಇದಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಮಗ್ರ ಮತ್ತು ಸಮನ್ವಯದ ಪ್ರತಿಕ್ರಿಯೆಯ ಕುರಿತಾದ ನಿರ್ಣಯವನ್ನು 193 ಸದಸ್ಯರ ಸಾಮಾನ್ಯ ಸಭೆಯು ಶುಕ್ರವಾರ ಅಂಗೀಕರಿಸಿತು, 169 ರಾಷ್ಟ್ರಗಳು ಕೋವಿಡ್-19 ಸಾಂಕ್ರಾಮಿಕವನ್ನು ವಿಶ್ವಸಂಸ್ಥೆಯ ಇತಿಹಾಸದಲ್ಲೇ ದೊಡ್ಡ ಜಾಗತಿಕ ಸವಾಲುಗಳಲ್ಲಿ ಒಂದೆಂದು ಗುರುತಿಸಿದ ನಿರ್ಣಯದ ಪರವಾಗಿ ಮತ ಚಲಾಯಿಸಿದವು.
ಯುಎಸ್ ಮತ್ತು ಇಸ್ರೇಲ್ ನಿರ್ಣಯದ ವಿರುದ್ಧ ಮತ ಚಲಾಯಿಸಿದವು ಮತ್ತು ಉಕ್ರೇನ್ ಮತ್ತು ಹಂಗೇರಿ ಮತದಾನದಿಂದ ದೂರವೇ ಉಳಿಯಿತು.
ಯುಎನ್ ರಾಯಭಾರದ ಭಾರತದ ಉಪ ಖಾಯಂ ಪ್ರತಿನಿಧಿ ಕೆ.ನಾಗರಾಜ್ ನಾಯ್ಡು ಅವರು ಟ್ವೀಟ್ ಮಾಡಿ, “ಸಾಮಾನ್ಯ ಸಭೆಯಲ್ಲಿ ಕೋವಿಡ್-19 ನಿರ್ಣಯದ ಪರವಾಗಿ ಭಾರತದ ಮತಗಳು ಸಾಂಕ್ರಾಮಿಕ ರೋಗವನ್ನು ಮಹತ್ತರವಾದ ಜಾಗತಿಕ ಸವಾಲುಗಳಲ್ಲಿ ಒಂದೆಂದು ಪರಿಗಣಿಸುತ್ತದೆ ಮತ್ತು ಅದರ ವಿರುದ್ಧ ಏಕತೆ, ಒಗ್ಗಟ್ಟಿನ ಆಧಾರದ ಮೇಲೆ ಹೋರಾಡಲು ಬಹುಪಕ್ಷೀಯ ಸಹಕಾರವನ್ನು ಪುನರುಚ್ಚರಿಸುತ್ತದೆ” ಎಂದಿದ್ದಾರೆ.
ನಿರ್ಣಯ ಎಲ್ಲಾ ಹಂತಗಳಲ್ಲಿನ ಅಂತರರಾಷ್ಟ್ರೀಯ ಸಹಕಾರ, ಬಹುಪಕ್ಷೀಯತೆ ಮತ್ತು ಒಗ್ಗಟ್ಟಿನ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಮತ್ತು ಕೋವಿಡ್-19 ಸಾಂಕ್ರಾಮಿಕ ಮತ್ತು ಅವುಗಳ ಪರಿಣಾಮಗಳಂತಹ ಜಾಗತಿಕ ಬಿಕ್ಕಟ್ಟುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಏಕೈಕ ಮಾರ್ಗವಾಗಿದೆ ಮತ್ತು ವಿಶ್ವದ ಪ್ರಮುಖ ನಾಯಕತ್ವದ ಪಾತ್ರವನ್ನು ಅಂಗೀಕರಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.