ಇಟಾನಗರ್: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಸುಮಾರು 11 ಗಂಟೆಗಳ ಕಾಲ 24 ಕಿ.ಮೀ ದೂರದವರೆಗೆ ಟ್ರೆಕ್ಕಿಂಗ್ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ತವಾಂಗ್ ಜಿಲ್ಲೆಯ ತಮ್ಮ ಸ್ವ ಕ್ಷೇತ್ರವಾದ ಮುಕ್ತೋದಲ್ಲಿ ಪ್ರವಾಸ ನಡೆಸುತ್ತಿರುವ ಅವರು, ದೂರದ ಹಳ್ಳಿಯ ಜನರನ್ನು ಭೇಟಿ ಮಾಡಲು ಟ್ರೆಕ್ಕಿಂಗ್ ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
41 ವರ್ಷದ ಅವರು, ಪರ್ವತ ಭೂಪ್ರದೇಶಗಳು ಮತ್ತು ಕಾಡುಗಳ ಮೂಲಕ ನಡೆದು ತವಾಂಗ್ನಿಂದ 97 ಕಿ.ಮೀ ದೂರದಲ್ಲಿರುವ ಲುಗುಥಾಂಗ್ ಗ್ರಾಮವನ್ನು ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಕಾರ್ಪು-ಲಾ (16,000 ಅಡಿ)ದಿಂದ ಲುಗುಥಾಂಗ್ (14,500 ಅಡಿ) ದಾಟಿದೆ. ಇದು ಪ್ರಯಾಸಕರವಾದ ಪ್ರಯಾಣ” ಎಂದು ಗುರುವಾರ ತವಾಂಗ್ಗೆ ಮರಳಿದ ನಂತರ ಖಂಡು ಟ್ವೀಟ್ ಮಾಡಿದ್ದಾರೆ. ತವಾಂಗ್ ಜಿಲ್ಲೆಯ ಥಿಂಗ್ಬು ತಹಸಿಲ್ನಲ್ಲಿ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಈ ಗ್ರಾಮವು 10 ಮನೆಗಳು ಮತ್ತು 50 ಜನರನ್ನು ಹೊಂದಿದೆ.
“ಪ್ರತಿ ಪ್ರಮುಖ ಕಾರ್ಯಕ್ರಮದ ಪ್ರಯೋಜನಗಳು ಪ್ರತಿ ಪ್ರದೇಶಗಳ ಕೊನೆಯ ವ್ಯಕ್ತಿಯನ್ನು ಕೂಡ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಲುಗುಥಾಂಗ್ ಗ್ರಾಮಸ್ಥರೊಂದಿಗೆ ಸಭೆ ನಡೆಸಿದೆ” ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಕಣ್ಣಿಗೆ ಕಟ್ಟುವ ಕಾರ್ಪು-ಲಾ ಪರ್ವತ ಮತ್ತು ಮಾರ್ಗದಲ್ಲಿ ಕಾಣುವ ನೈಸರ್ಗಿಕ ಸರೋವರಗಳನ್ನು ದಾಟಿ ಈ ಹಳ್ಳಿಗೆ ಪ್ರವೇಶಿಸಬೇಕಾಗಿರುವುದರಿಂದ ಈ ಹಳ್ಳಿಗೆ ಪ್ರಯಾಣವು ಕ್ಲಿಷ್ಟಕರ ಮತ್ತು ಆನಂದದಾಯಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.