ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಚಾರ್ಯ ವಿನೋಬಾ ಭಾವೆ ಮತ್ತು ಸ್ವಾಮಿ ವಿವೇಕಾನಂದರನ್ನು ಇಂದು ಟ್ವಿಟ್ ಮೂಲಕ ಸ್ಮರಿಸಿಕೊಂಡಿದ್ದಾರೆ.
ಸೆ.11ರಂದು 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಉದ್ದೇಶಿಸಿ ಐತಿಹಾಸಿಕ ಭಾಷಣವನ್ನು ಮಾಡಿದ್ದರು. ಮಾತ್ರವಲ್ಲದೇ ಇಂದು ಆಚಾರ್ಯ ವಿನೋಬಾ ಭಾವೆ ಅವರ ಜನ್ಮದಿನಾಚರಣೆಯಾಗಿದೆ.
ಟ್ವಿಟ್ ಮಾಡಿರುವ ಮೋದಿ, ” ಸೆಪ್ಟೆಂಬರ್ 11 ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸೂಚಿಸುತ್ತದೆ. ಆಚಾರ್ಯ ವಿನೋಬಾ ಭಾವೆ ಅವರ 125 ನೇ ಜಯಂತಿ ಮತ್ತು ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದ 127 ನೇ ವಾರ್ಷಿಕೋತ್ಸವವನ್ನು ಈ ದಿನ ಸೂಚಿಸುತ್ತದೆ” ಎಂದಿದ್ದಾರೆ.
“1893ರಲ್ಲಿ ಸ್ವಾಮಿ ವಿವೇಕಾನಂದರ ಭಾಷಣವು ಭಾರತದ ನೀತಿ ಮತ್ತು ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವ ಮೌಲ್ಯಗಳನ್ನು ತೋರಿಸಿದೆ. ವಿವೇಕಾನಂದರ ಚಿಕಾಗೊ ಭಾಷಣದ ಪಠ್ಯವನ್ನು ಓದಬೇಕೆಂದು ಯುವಜನತೆಗೆ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ. ವಿವೇಕಾನಂದರ ಭಾಷಣದ ಪಠ್ಯವನ್ನು ಅವರು ಹಂಚಿಕೊಂಡಿದ್ದಾರೆ.
ವಿನೋಬಾ ಭಾವೆ ಅವರನ್ನು ಸ್ಮರಿಸಿದ ಮೋದಿ, “ಆಚಾರ್ಯ ವಿನೋಬಾ ಭಾವೆ ಮಹಾತ್ಮ ಗಾಂಧಿಯವರ ಅತ್ಯಂತ ನಿಷ್ಠ ಅನುಯಾಯಿಗಳಲ್ಲಿ ಒಬ್ಬರು. ಅವರು ಸಾಮಾಜಿಕ ಸಬಲೀಕರಣ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಸೇವೆಯ ಬಗೆಗಿನ ಅವರ ಉತ್ಸಾಹ ಅನುಕರಣೀಯವಾಗಿತ್ತು. ಅವರ ನಮ್ರತೆ ಮತ್ತು ಸರಳತೆಯಿಂದಾಗಿ ಅವರು ಪ್ರೀತಿಸಲ್ಪಡುತ್ತಿದ್ದರು” ಎಂದಿದ್ದಾರೆ.
ಯುಎಸ್ಎನಲ್ಲಿ ನಡೆದ 9/11 ಭೀಕರ ದಾಳಿಯನ್ನು ಕೂಡ ಮೋದಿ ಟ್ವಿಟ್ ಮೂಲಕ ಸ್ಮರಿಸಿದ್ದಾರೆ.
Today, on 11th September we in India mark two important milestones.
The Jayanti of Acharya Vinoba Bhave.
The day Swami Vivekananda delivered his outstanding address in Chicago.
These great men have a lot to teach the entire humanity.
— Narendra Modi (@narendramodi) September 11, 2020
Acharya Vinoba Bhave was one of the most devout followers of Mahatma Gandhi. He placed great emphasis on social empowerment and education. His passion towards Gau Seva was exemplary. He endeared himself to several people due to his humility and simplicity.
— Narendra Modi (@narendramodi) September 11, 2020
Swami Vivekananda’s address in 1893 perfectly demonstrated the spirit of India’s ethos and the values that are an integral part of our land. I urge youngsters to read the text of his address. https://t.co/1iz7OgAWm3
— Narendra Modi (@narendramodi) September 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.