ವದೆಹಲಿ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿಸ್ತರಣಾವಾದಿ ನಡವಳಿಕೆಯ ಮೇಲೆ ಸೂಕ್ಷ್ಮ ದೃಷ್ಟಿ ನೆಟ್ಟಿರುವ ಭಾರತವು ಜಪಾನ್ನೊಂದಿಗೆ ಪರಸ್ಪರ ಸರಕು ಬೆಂಬಲ ವ್ಯವಸ್ಥೆಗೆ (ಎಂಎಲ್ಎಸ್ಎ) ಸಹಿ ಹಾಕಿದೆ. ಈ ಒಪ್ಪಂದಕ್ಕೆ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಜಪಾನಿನ ರಾಯಭಾರಿ ಸುಜುಕಿ ಸಟೋಶಿ ಸಹಿ ಹಾಕಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಈ ಒಪ್ಪಂದವು ಉಭಯ ದೇಶಗಳ ಸಶಸ್ತ್ರ ಪಡೆಗಳಿಂದ ಪರಸ್ಪರ ಸಹಕಾರ, ಪರಸ್ಪರ ಕಾರ್ಯಸಾಧ್ಯತೆ ಮತ್ತು ಪರಸ್ಪರ ಮಿಲಿಟರಿ ಸೌಲಭ್ಯಗಳ ಬಳಕೆಗೆ ಅನುವು ಮಾಡಿಕೊಡುವ ಚೌಕಟ್ಟು ನಿರ್ಮಿಸಿಕೊಡುತ್ತದೆ.
“ಈ ಒಪ್ಪಂದವು ದ್ವಿಪಕ್ಷೀಯ ತರಬೇತಿ ಚಟುವಟಿಕೆಗಳಲ್ಲಿ ತೊಡಗಿರುವ ಸಂದರ್ಭದಲ್ಲಿ ಸರಬರಾಜು ಮತ್ತು ಸೇವೆಗಳನ್ನು ಪರಸ್ಪರ ಒದಗಿಸಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಜಪಾನ್ನ ಸಶಸ್ತ್ರ ಪಡೆಗಳ ನಡುವೆ ನಿಕಟ ಸಹಕಾರಕ್ಕಾಗಿ ಅನುವು ಮಾಡಿಕೊಡುವ ಚೌಕಟ್ಟನ್ನು ಸ್ಥಾಪಿಸುತ್ತದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕ, ಫ್ರಾನ್ಸ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಆಸ್ಟ್ರೇಲಿಯಾದೊಂದಿಗೆ ಭಾರತ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದೆ.
2016ರಲ್ಲಿ ಯುಎಸ್ ಜೊತೆ ಒಪ್ಪಂದ ಮಾಡಿಕೊಂಡ ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೋರಾಂಡಮ್ ಆಫ್ ಅಗ್ರಿಮೆಂಟ್ (ಲೆಮೊಎ) ಭಾರತಕ್ಕೆ ಇಂಧನ ತುಂಬುವ ಸೌಲಭ್ಯಗಳನ್ನು ನೀಡುತ್ತದೆ ಮತ್ತು ಜಿಬೌಟಿ, ಡಿಯಾಗೋ ಗಾರ್ಸಿಯಾ, ಗುವಾಮ್ ಮತ್ತು ಸುಬಿಕ್ ಕೊಲ್ಲಿಯಲ್ಲಿರುವ ಅಮೆರಿಕನ್ ನೆಲೆಗಳಿಗೆ ಪ್ರವೇಶವನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.